ಕೇಂದ್ರ ಕಾರಾಗೃಹದಲ್ಲಿ ಲಕ್ಷ-ವೃಕ್ಷ ಆಂದೋಲನ
ಕಲಬುರಗಿ:ಜೂ.27:ಲಕ್ಷ-ವೃಕ್ಷ ಆಂದೋಲನ ಕಾರ್ಯಕ್ರಮದಡಿ ಕಲಬುರಗಿ ಮಕ್ತಂಪೂರದ ಗದ್ದಗಿ ಮಠದ ವಿಜಯ ಮಹಾಂತೇಶ ಶಿವಾಚಾರ್ಯರವರ ನೇತೃತ್ವದಲ್ಲಿ ಮನುಕುಲದ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಮ್ಲಜನಕವನ್ನು ನೀಡುವಂತಹ ಸುಮಾರು 50 ಕ್ಕೂ ಹೆಚ್ಚು ಸಸಿಗಳು (ತೆಂಗಿನ, ಹೊಂಗೆ, ಬೇವು), 100 ಬೀಜಗಳ ಚೆಂಡುಗಳನ್ನು ಕಲಬುರಗಿಯ ಕೇಂದ್ರ ಕಾರಾಗೃಹ ಕೃಷಿ ಜಮೀನಿನಲ್ಲಿ ಗುರುವಾರ ನೆಡಲಾಯಿತು.
ಈ ಸಂದರ್ಭದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ|| ಪಿ. ರಂಗನಾಥ, ಸಹಾಯಕ ಅಧೀಕ್ಷಕರಾದ ಬಿ. ಸುರೇಶ, ಶಿಕ್ಷಕರಾದ ನಾಗರಾಜ ಮುಲಗೆ, ಜೈಲರ್‍ಗಳಾದ ಸೈನಾಜ್ ಎಂ. ನಿಗೇವಾನ್, ಸಾಗರ ಪಾಟೀಲ್ ಹಾಗೂ ಕಲಬುರಗಿ ಮಕ್ತಂಪೂರದ ಗದ್ದಗಿ ಮಠ ವತಿಯಿಂದ ಆಗಮಿಸಿದ ಶರಣು ಮತ್ತಿಮೂಡ, ಪ್ರಶಾಂತ ಗುಡ್ಡ ಹಾಗೂ ಲಕ್ಷ್ಮೀಕಾಂತ ಜೊಲ್ಲದ ಅವರು ಉಪಸ್ಥಿತರಿದ್ದರು.