ಜೂ. 28 ರಿಂದ 30 ರವರೆಗೆ ಮೂರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಜೂ.27:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಹಳೆಯ ನೀರು ಶುದ್ಧೀಕರಣ ಘಟಕದಲ್ಲಿ (ಹಳೆ ಫೀಲ್ಟರ್ ಬೇಡ್‍ನಲ್ಲಿ) ಇರುವ ಎನ್.ಎಸ್.ಆರ್. (ಓSಖ)/ನೆಲ ಮಟ್ಟದ ಜಲ ಸಂಗ್ರಹಗಾರದ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಇದರ ವ್ಯಾಪ್ತಿಯಲ್ಲಿ ಬರುವ ಮೇಲ್ಮಟದ ಜಲಾ ಸಂಗ್ರಹಗಾರದಲ್ಲಿ ಬರುವ ಕೆಳಕಂಡ ಬಡಾವಣೆಗಳಲ್ಲಿ ಇದೇ ಜೂನ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಲಬುರಗಿ ನಗರದ ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕೆಯುಐಡಿಎಫ್‍ಸಿಯ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.
ಮೊಮಿನಪುರ, ಡಿಸಿ ಟ್ಯಾಂಕ್, ವೇಟರ್ನರಿ ಟ್ಯಾಂಕ್ ಹಾಗೂ ಡಿ.ವ್ಹಿ.ಸಿ. ಟ್ಯಾಂಕಿನ ಅಡಿಯಲ್ಲಿ ಬರುವ ಪ್ರದೇಶಗಳಾದ, ಸಂದಲ ಗಲ್ಲಿ, ಚಾಚಾ ಹೋಟಲ್, ಮೊಮಿನಪುರ, ಗಣೇಶ ಮಂದೀರ, ಲುಕಮನ ಕಾಲೇಜ, ಭರತ ತಾಂಡಾ, ಬಾಪುನಗರ, ಸುಂಧರ ನಗರ, ಲೋವರ್ ಜಗತ್, ಮಕ್ತಂಪುರ, ಚಪಲ್ಲ ಬಜಾರ, ಸಂತ್ರಸವಾಡಿ, ಮಿಲನ ಚೌಕ್, ಗದಗಿ ಮಠ, ಮರಗಮ್ಮ ದೇವಸ್ಥಾನ, ಲೇಡಿಜ್ ಹಸ್ಟಲ್, ಪೊಲೀಸ ಕ್ವಾಟರ್ಸ್, ಕುವೆಂಪು ಕಾಲೋನಿ, ಮಹಾಲಕ್ಷ್ಮಿ ಲೆಔಟ್, ವೀರೇಶ ನಗರ, ಸಾಯಿ ನಗರ, ಐ-ವಾನ-ಶಾಯಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಲಬುರಗಿ ನಗರದ ಸಾರ್ವಜನಿಕರು ನೀರಿಗೆ ಸಂಬಂಧಿಸಿದ ದೂರುಗಳಿದ್ದರೆ ಶುಲ್ಕರಹಿತ (ಖಿoಟಟ ಈಡಿee) ಸಹಾಯವಾಣಿ ಸಂಖ್ಯೆ 1800 425 8247 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಹಾಗೂ ದೂರುಗಳನ್ನು ದಾಖಲಿಸಬೇಕೆಂದು ಅವರು ತಿಳಿಸಿದ್ದಾರೆ.