ವಿದ್ಯಾರ್ಥಿನಿಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಪ್ರಶ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕು: ಡಾ.ನಾಗಲಕ್ಷೀ ಚೌಧರಿ
ಕಲಬುರಗಿ:ಜೂ.27: ವಿದ್ಯಾರ್ಥಿನಿಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಪ್ರಶ್ನಿಸುವ ಮನೋಭಾವವನ್ನು ರೂಡಿಸಿಕೊಳ್ಳಬೇಕು ಎಂದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಗುರುವಾರ ಇಲ್ಲಿನ ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕಲಬುರಗಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಾಬಾ ಸಾಹೇಬ್ ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಎಲ್ಲ ವಿಷಯಗಳ ಬಗ್ಗೆ ಕಲಿಕೆ ಮಾಡಿಸುತ್ತೀರಾ ಆದರೆ ಹೆಣ್ಣು ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು.
7 ನೇ ತರಗತಿಯಿಂದ ಹೆಣ್ಣು ಮಕ್ಕಳಲ್ಲಿ ಹಾರ್ಮೋನಲ್ ಬದಲಾವಣೆಗಳು ಆಗುವುದು ಸಹಜ ಅವÀರಿಗೆ ಯಾರು ಹೇಗೆ ವರ್ತನೆ ಮಾಡುತ್ತಿರುವುದು ತಿಳಿದುಕೋಳ್ಳುವ ಸಾಮಥ್ರ್ಯ ಇರುತ್ತದೆ ಹಾಗಾಗಿ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮತ್ತು ಜನಸೇಹಿ ಹಾಗೂ ಮಿಷನ್ ಸುರಕ್ಷಾಗಳ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡುವುದರಲ್ಲಿ ಏನು ತಪ್ಪಿಲ್ಲ ಎಂದರು.
ವಿದ್ಯಾರ್ಥಿ ಪ್ರಶ್ನೆಯೊಂದಿಗೆ ಮಾತನಾಡಿದ ಅವರು ಮಹಿಳಾ ಮೀಸಲಾತಿ ಬಗ್ಗೆ ವಿದ್ಯಾರ್ಥಿನಿಯರೊಂದಿಗೆ ಆಳವಾದ ಸಂವಾದ ನಡೆಸಿದ ಅವರು ಮಹಿಳೆಯರು ಹೇಗೆ ಸಬಲೀಕರಣ ಆಗಲು ಬಾಬಾ ಸಾಹೇಬ್ ಅವರು ಹೇಳಿದ ಮಾತು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಬಗ್ಗೆ ಬಹಳ ಗಾಢವಾಗಿ ತಿಳಿ ಹೇಳಿದರು.
ಜಿಮ್ಸ್‍ನಲ್ಲಿ ವಾರಗಟ್ಟಲೇ ನೀರಿನ ಪೂರೈಕೆ ಇರಲಿಲ್ಲ. ಗರ್ಭಿಣಿಯರು ಬಾಣಂತಿಯರು ಅಷ್ಟು ದಿನ ಸ್ನಾನ ಇಲ್ಲದೇ ಹೇಗೆ ಕಳೆಯಬೇಕು? ಇಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ನಿಮ್ಮ ಮನೆಯ ಹತ್ತ್ತಿರ ಕಸ ಬಿದ್ದಿದ್ದರೆ ಕೂಡಲೇ ಕಾರ್ಪೋರೇಶನ್‍ವರಿಗೆ ಕರೆ ಮಾಡಬೇಕು. ಪೊಲೀಸ್ ರಾಣೆಗೆ ದೂರು ನೀಡಲು ಹೋದಾಗ ಸಿಬ್ಬಂದಿ ನಿಮ್ಮೊಂದಿಗ ಸೌಜನ್ಯದೊಂದಿಗೆ ವರ್ತಿಸಿ ನಿಮ್ಮ ದೂರು ಸ್ವೀಕರಿಸಬೇಕು. ಠಾಣೆಯಲ್ಲಿ ಸೂಕ್ತ ಸ್ಪಂದನೆ ದೊರೆಯದಿದ್ದರೆ ಪೊಲೀಸ್ ಠಾಣೆಯ ಹೊರಗೆ ಅಂಟಿಸಿರುವ ಕ್ಯೂಆರ್‍ಕೋಡ್ ಸ್ಕ್ಯಾನ್ ಮಾಡಿ ಅಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಬೇಕು ಎಂದರು.
ನಂತರ ನಡೆದ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ನಾಗಲಕ್ಷ್ಮೀ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬರಬೇಕು. ಚುನಾವಣೆಯಲ್ಲಿ ಆಯ್ಕೆಯಾಗಿ ಉತ್ತಮ ಆಡಳಿತ ನೀಡಿದರು ಜನರು ನಿಮ್ಮ ಹಿಂದೆ ಇರುತ್ತಾರೆ. ನೀವೊಂದು ಪ್ರಬಲ ಶಕ್ತಿಯಾಗಿ ಕಾಣಿಸಿಕೊಂಡಾಗ ಯಾವುದೇ ಸರ್ಕಾರವಿದ್ದರೂ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಹಾಗಾಗಿ ರಾಜಕಾರಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಿ ಎಂದರು. .
ಪದವಿ ಕಾಲೇಜಿನ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮಹಿಳಾ ಆಯೋಗ ಅಧ್ಯಕ್ಷೆ ಅವರು ಸಂವಾದ ನಡೆಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕೆ.ಕೆ.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ. ಲಕ್ಷ್ಮೀನಾರಾಯಪ್ಪ ಕುರಬರ್ , ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ ಯು., ಲಾ ವಿಭಾಗ ಡೀನರಾದ ಡಾ. ವಿಜಯಕುಮಾರು ಸಾಲಿಮನಿ, ವಾಣಿಜ್ಯ ವಿಭಾಗ ಡೀನರಾದ ಡಾ.ರಾಜಕುಮಾರು ಸಲಗರ, ಸಾಂಸ್ಕøತಿ ಕಾರ್ಯದರ್ಶಿ ಡಾ. ಬಲಭೀಮ ಸಾಂಗ್ಲೀ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡ. ಸುರೇಶ ಮಾಳೆಗಾಂವ, ಲಕ್ಷ್ಮೀಕಾಂತ ಹೂಗಾರ ಅವರು ಪ್ರಾರ್ಥನ ಗೀತೆಯನ್ನು ಹಾಡಿದರು. ಶಾಮಲ್ಲಾ ಸ್ವಾಗತಿಸಿದರು. ವಿಧ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಸುರೇಶ ಮಾಳೆಗಾಂವ ನಿರೂಪಿಸಿದರು. ಇರಮ್ಮ ಪಾಟೀಲ್ ವಂದರ್ನಾಪಣೆಯನ್ನು ಮಾಡಿದರು.