ಸ್ನೇಹಿತರಿಂದಲೇ ವ್ಯಕ್ತಿಯ ಹತ್ಯೆ
ಅಫಜಲಪುರ,ಜೂ.27-ಮಹಾರಾಷ್ಟ್ರದಿಂದ ಸುಕ್ಷೇತ್ರ ದೇವಲ ಗಾಣಗಪುರಕ್ಕೆ ದತ್ತನ ದರ್ಶನ ಪಡೆಯಲು ಬಂದ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರು ಸಂಗಮದಿಂದ ಅನತಿ ದೂರದಲ್ಲಿರುವ ಜಮೀನಿಗೆ ಕರೆದೊಯ್ದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.
ಪುಣೆ ಮೂಲದ ಮಹೇಶ ಅಂಕುಶ ಗೋಟ್ಲೆ (28) ಹತ್ಯೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಸ್.ಪಿ ಅಕ್ಷಯ್ ಹಾಕೆ, ಡಿವೈಎಸ್ಪಿ ಗೋಪಿ ಬಿ.ಆರ್, ಸಿ.ಪಿ.ಐ ಚನ್ನಯ್ಯ ಹಿರೇಮಠ, ಪಿ.ಎಸ್.ಐ ರಾಹುಲ್ ಪವಾಡೆ, ಶ್ವಾನ ದಳ, ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಲ ಗಾಣಗಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.