ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳು ದಂಧೆ
ವಾಡಿ,ಜೂ.27-ಚಿತ್ತಾಪುರ ತಾಲೂಕಿನ ಇಂಗಳಗಿ-ಶಹಾಬಾದ ನಡುವಿನ ಬ್ರಿಜ್ ಹತ್ತಿರ ಕಾಗಿಣಾ ನದಿಯಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಟ್ರ್ಯಾಕರ್‍ಗಳು ಮರಳು ತುಂಬಿಕೊಂಡು ಸಾಗುತ್ತಿವೆ. ರಾಯಲ್ಟಿ ಇಲ್ಲದೆ, ಯಾರ ಭಯವಿಲ್ಲದೆ ಮರಳು ದಂಧೆಯಲ್ಲಿ ತೋಡಗಿದ್ದಾರೆ.
ಸರಕಾರದ ಆದೇಶ ಗಾಳಿಗೆ ತೂರಿ ಅಕ್ರಮ ಮರಳು ದಂಧೆ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದೆ.