ವಿವಿಧ ಬೇಡಿಕೆ ಈಡೇರಿಸುವಂತೆ ಸಹಾಯಕ ಆಯುಕ್ತರಿಗೆ ಕರವೇ ಮನವಿ
ಸೇಡಂ,ಜೂ, 27: ಇಲ್ಲಿನ ಹೃದಯಭಾಗದಲ್ಲಿರುವ ವಾಸವದತ್ತ ಕಾರ್ಖಾನೆಗೆ ಸಂಚರಿಸುವ ರೈಲು ವಾಹನಗಳ ಸಮಯ ಬದಲಿಸಬೇಕು ಏಕೆಂದರೆ ಶಾಲೆ ಕಾಲೇಜು ಸಮಯದಲ್ಲಿ ಹೆಚ್ಚಿನ ರೈಲು ಸಂಚಾರ ಮಾಡಲಾಗುತ್ತಿದ್ದು, ವಿಧ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಯ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕನಿಷ್ಟ ರೈಲು ಕಾರ್ಖಾನೆಗೆ ಸರಲು 30 ನಿಮಿಷ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ರಾತ್ರಿ 11 ಗಂಟೆ ನಂತರ ಸಂಚರಿಸಬೇಕು, ತಾಲೂಕಿನ ನಾಡಕಾಚೇರಿಗಳಲ್ಲಿ ಸುಮಾರು ವರ್ಷಗಳಿಂದ ಭಾಟರಿ ವ್ಯವಸ್ಥೆ ಇಲ್ಲ. ವಿದ್ಯತ್ ಸಂಪರ್ಕ ಇಲದಿದ್ದಾಗ ಅಲ್ಲಿನ ಸಿಬಂಧಿಗಳಿಗೆ ತುಂಬಾ ತೊಂದರೆಯಾಗುತ್ತದೆ ಶಿಫುದಲ್ಲಿ ಪ್ರತಿ ನಾಡಕಚೇರಿಗಳಿಗೆ ಬ್ಯಾಟರಿ ವ್ಯವಸ್ಥೆ ಮಾಡಿಕೊಡಬೇಕು, ಮತ್ತು ಕೇಲವು ಗ್ರಾಮಗಳಲ್ಲಿ ಜೆ.ಜೆ.ಎಮ್ ಕಾಮಗಾರಿ ಕಳಪೆ ಮಟ್ಟ ನಡೆದಿದೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸ್ಪಂಧಿಸುತ್ತಿಲ್ಲ ಗುಣಮಟ್ಟದ ಕಾಮಗಾರಿ ಮಾಡಿದರೆ ಮಾತ್ರ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು, ಕೇಲವು ಹಳ್ಳಿಗಳ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೊಗಲು ಬಸ್ಸುಗಳ ಸೌಕರ್ಯ ಇರುವುದಿಲ್ಲ ಡಿಪೆÇ ವ್ಯವಸ್ತ್ರವಕರಿಗೆ ಮನವರಿಕೆ ಮಾಡಿ ಸರಿಯಾದ ಸಮಯಕ್ಕೆ ಬಸ್ಸುಗಳು ಸಂಚಾರಿಸಲು ಕೂರಿಕ,ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಇರುವುದಿಲ್ಲ ಮತ್ತು ಸಣ್ಣ ಪುಟ್ಟರೋಗಿಗಳಿಗೆ ಸಹ ನೇರವಾಗಿ ಕಲಬುರಗಿಗೆ ಹೋಗಿ ಎಂದು ಹೇಳುತ್ತಾರೆ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲು ಮತ್ತು ರೋಗಿಗಳಿಗೆ ಪ್ರಥಮ ಚಿಕಿ ಸಹ ಮಾಡದೇ ಕಲಬುರಗಿ ಆಸ್ಪತ್ರೆಗೆ ಬರಿಯುವುದು. ನಿಲ್ಲಿಸಬೇಕು, ಮೇಲೆ ತೊರಿಸಿದ ಎಲ್ಲಾ ಬೇಡಿಕೆಗಳನ್ನು ಅತಿ ಶಿಘ್ರದಲ್ಲಿ ಈಡೇರಿಸುವಂತೆ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ನೇತೃತ್ವದಲ್ಲಿ ಮನವಿ ಪುತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ತಾಲೂಕಿನ ಕರವೇ ಸೈನಿಕರು ಇದ್ದರು.