ಕೋವಿಡ್ -19 ವೇಳೆ ಸ್ಪಂದನಾ ಆಸ್ಪತ್ರೆ ಸಾರ್ವಜನಿಕರ ಜೀವ ಉಳಿಸಿ ಸ್ಪಂದಿಸಿದೆ: ಜಗದೀಶ ಕ್ಷತ್ರಿ
ಇಂಡಿ:ಜೂ.27:ಸ್ಪಂದನಾ ಆಸ್ಪತ್ರೆ ಸಾರ್ವಜನಿಕ ಬಡರೋಗಿಗಳ ಸೇವೆ ಮಾಡುವ ಮೂಲಕ ಸತತ ಎರಡು ವರ್ಷಗಳ ಪಯರ್ಂತರ ಶ್ರಮಿಸುತ್ತಾ ಬಂದಿದ್ದು , ವ್ಯದ್ಯರ ಕೊರತೆಯಿಂದ ಕೆಲ ಸಮಯ ಹಿನ್ನಡೆಯಾಗಿದೆ. ಕಳೆದ ಕೋವಿಡ್ -19 ಸಂಧರ್ಬದಲ್ಲಿ ಸ್ಪಂದನಾ ಆಸ್ಪತ್ರೆ ಹಾಗೂ ವೈದ್ಯರು ಮತ್ತು ಸಿಬ್ಬಂದಿ ಸಾರ್ವಜನಿಕರ ಜೀವ ಉಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ, ಸದ್ಯ ಮಾನೇಜಿಂಗ್ ಡ್ಯಾರೇಕ್ಟರ್ ಡಾ|| ಲಕ್ಷ್ಮೀಕಾಂತ ಚನ್ನಪ್ಪ ಮೇತ್ರಿ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಆಸ್ಪತ್ರೆಗಳು ಹೇಗೆ ನಡೆಸಬೇಕು ಎಂಬ ಸಂಪೂರ್ಣ ಜ್ಞಾನ ಅವರಲ್ಲಿರುವದರಿಂದ ಲೀಜ ಕೊಡಲಾಗಿದೆ ಎಂದು ಸ್ಪಂದನಾ ಆಸ್ಪತ್ರೆಯ ನಿರ್ದೇಶಕ ಜಗದೀಶ ಕ್ಷತ್ರಿ ಹೇಳಿದರು.
ಸ್ಪಂದನಾ ಆಸ್ಪತ್ರೆ ಹೆಸರೇ ಸೂಚಿಸಿದಂತೆ ಇದು ಜನರಿಗೆ ಸ್ಪಂದಿಸಿ ಉತ್ತಮ ಸೇವಾ ಮನೋಭಾವ ಹೊಂದಿದ ಅಸ್ಪತ್ರೆಯಾಗಿದೆ. 100 ಬೆಡ್ ಹೊಂದಿರುವ ಸುಮಾರು 122 ಹಳ್ಳಿಗಳಿಗೆ ಕವರೇಜ್ ಮಾಡಿ ಸಾರ್ವಜನಿಕರ ಸೇವೆಗಾಗಿ ಅಣಿಯಾಗಿದೆ. ನಾನು ಮಣಿಪಾಲ ಆಸ್ಪತ್ರೆಯಲ್ಲಿ 6 ವರ್ಷ ಸೇವೆ ಮಾಡಿದ ಅನುಭವ ಹಾಗೂ ಸರಕಾರಿ ನೌಕರನಾಗಿ ಕೆಲಸ ಮಾಡಿರುವೆ ಗಳಿಸುವ ಮಾರ್ಗಕ್ಕಾಗಿ ನಾನು ಈ ಸಂಸ್ಥೆ ಪಡೆದಿಲ್ಲ, ನನ್ನ ತಾಲೂಕಿನಲ್ಲಿ ಸಾರ್ವಜನಿಕರಿಗೆ ತುರ್ತು ಸೇವೆ ಮಾಡುವ ಉದ್ದೇಶದಿಂದ ಪ್ರಾರಂಭಿಸುತ್ತಿದ್ದೇನೆ. ಈ ಆಸ್ಪತ್ರೆಯಲ್ಲಿ ಒಳ್ಳೆಯ ನುರಿತ, ಅನುಭವಿ ಹಾಗೂ ಬೇರೆ ಹೋರಗಿನ ವೈದ್ಯರ ಸೇವೆ ಕೂಡಾ ಲಭ್ಯವಾಗಲಿದೆ. ಸ್ಪಂದನಾ ಆಸ್ಪತ್ರೆ ಪ್ರಕೃತಿಯ ಮಡಿಲ್ಲಿ ಹೇಗೆ ಧರ್ಮಸ್ಥಳ ಆಸ್ಪತ್ರೆ ತಲೆ ಎತ್ತಿ ನಿಂತಿದೆ ಹಾಗೆ ಇದು ಕೂಡಾ ಪಟ್ಟಣದ ಹೊರಭಾಗ ಪ್ರಕೃತಿಯ ಮಧ್ಯದಲ್ಲಿ 247 ತುರ್ತು ಸೇವೆ ನೀಡಲು ಸಜ್ಜಾಗಿ ನಿಂತಿದೆ. ತಾಲೂಕಿನಲ್ಲಿ 247 ಆಸ್ಪತ್ರೆಗಳು ಲಭ್ಯತೆ ಇಲ್ಲ ಹೆರಿಗೆ, ಅಫಘಾತ, ಹಾವುಕಡಿತ ಇಂತಹ ಅವಘಡಗಳು ಸಂಭವಿಸಿದಾಗ ಬೇರೆ ಕಡೆ ಹೋಗುವುದನ್ನು ತಪ್ಪಿಸಿ ಜೀವ ರಕ್ಷಿಸುವ ಕೆಲಸ ನಮ್ಮದಾಗಿದೆ. ಸ್ಪಂದನಾ ಆರೋಗ್ಯ ಸುರಕ್ಷಾ ಕಾರ್ಡ ಒಬ್ಬ ವ್ಯಕ್ತಿಗೆ 499 ರೂ ವರ್ಷಕ್ಕೆ ನಿಗದಿ ಮಾಡಲಾಗಿದ್ದು 1 ವರ್ಷದಲ್ಲಿ ಯಾವಾಗ ಬೇಕಾದರೂ ಉಚಿತ ಸೇವೆ ಮಾಡಿಸಿಕೊಳ್ಳಲಿ ಹಾಗೂ ಶೇ. 20 ಪ್ರತಿಶತ ಔಷಧಿ ,ಓ.ಪಿ.ಡಿ ಉಚಿತ ಸೇವೆ ಮಾಡಲಾಗುವುದು. ತಾಲೂಕಿನಿಂದ ಬೇರೆ ಬೇರೆ ಹಳ್ಳಿಗಳಿಗೆ ರೋಗಿಗಳು ಹೋಗಲು ಬರಲು ಅಂಬುಲೈನ್ಸ ವ್ಯವಸ್ಥೆ ಹಾಗೂ ಪಟ್ಟಣದಿಂದ ಆಸ್ಪತ್ರೆಗೆ ಬರುವವರಿಗೆ ಉಚಿತ ಸೇವೆ ಕೊಡಲಾಗುವುದು. ಕೆಲ ದಿನಗಳಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳು ವೀಮಾ ಸೇರಿದಂತೆ ಸರಕಾರ ನೀಡುವ ಎಲ್ಲ ವೈಧ್ಯಕೀಯ ಸೌಲಭ್ಯ ಮುಂಬರುವ ದಿನಗಳಲ್ಲಿ ಒದಗಿಸಲಾಗುವುದು ಆದ್ದರಿಂದ ನಾಳೆ ಜೂನ್, 30 ರಂದು ಮುಂಜಾನೆ 10-00 ಗಂಟೆಗೆ ಸ್ಪಂದನಾ ಆಸ್ಪತ್ರೆಯ ಪ್ರಾರಂಭೋತ್ಸವ ಇರುವದರಿಂದ ಪರಮ ಪೂಜ್ಯರು, ಶಾಸಕರು, ಗಣ್ಯರು ,ನಿರ್ದೇಶಕ ಮಂಡಳಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿರುವರು ಆದ್ದರಿಂದ್ದ ಎಲ್ಲರೂ ಭಾಗವಹಿಸಿ ಸಹಕಾರ ನೀಡಬೇಕು ಎಂದು ಮ್ಯಾನೇಜಿಂಗ ಡ್ಯಾರೇಕ್ಟರ್ ಡಾಲಕ್ಷ್ಮೀಕಾಂತ ಮೇತ್ರಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.