ಆರೋಗ್ಯವಂತರಾಗಿ ಬಾಳಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ತರಕಾರಿ ಸೇವಿಸಿ : ಧನಶ್ರೀ ಮಠ
ಹುಮನಾಬಾದ :ಜೂ.27: ಆರೋಗ್ಯವಂತರಾಗಿ ಬಾಳಲು ಪ್ರತಿಯೊಬ್ಬರು ಕಡ್ಡಾಯವಾಗಿ ಆಯಾ ರುತುಮಾನಗಳಲ್ಲಿ ದೊರಕುವ ಹಣ್ಣುಗಳನ್ನು ತಿನ್ನಬೇಕೆಂದು ಕಮಲಾಪುರ ಆಯುಷ್ ಡಾ. ಉಮಾಶಂಕರ್ ಧನಶ್ರೀ ಮಠ ಪಟ್ಟಣದ ಬಸವತೀರ್ಥ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಪರಿಸರವಾಹಿನಿ ಬೀದರ ಹಮ್ಮಿಕೊಂಡಿದ್ದ. ಪರಿಸರ ಸಂರಕ್ಷಣೆ ಜನಜಾಗೃತಿ ಹಾಗೂ ಔಷಧಿ ಸಸ್ಯಗಳ ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಅವರ ಮನೆ ಅಂಗಳದಲ್ಲಿ ತುಳಸಿ ನೆಲ್ಲಿ ನವಳಸರ ಸಸ್ಯಗಳು ನೆಟ್ಟಿ ಸಂರಕ್ಷಿಸಲು ಕರೆ ನೀಡಿದರು. ವಿಧ್ಯಾರ್ಥಿಗಳು ಹಣ್ಣುಗಳು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯಿಂದ ಆರೋಗ್ಯವಂತರಾಗಿ ಬಾಳಲು ಸಾಯವಾಗುತ್ತದೆ ಎಂದರು. ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ ವಾಯು ಮಾಲಿನ್ಯತೆ ಯಿಂದ ಮನುಷ್ಯನ ಆರೋಗ್ಯ ಮತ್ತು ಸ್ವಾಸ್ಥ??ಗಳ ಮೇಲೆ ಪರಿಣಾಮ ಬೀರುತ್ತದೆ. ಕೆಮ್ಮು ನೆಗಡಿ. ಕಣ್ಣುರಿ, ಉಬ್ಬುಸ, ಶ್ವಾಸಕೋಶಗಳ ಕಾಯಿಲೆಗಳು ಹಬ್ಬಲಿವೆ ಎಂದರು. ಯುನಿಸೆಫ್ ಸಹಭಾಗಿತ್ವದಲ್ಲಿ ಅಮೆರಿಕದ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯ 2021 ಪ್ರಕಾರ ಪ್ರಪಂಚದಲ್ಲಿ ವಾಯು ಮಾಲಿನ್ಯದಿಂದ 81 ಲಕ್ಷಜನರು ಬಲಿಯಾಗುತ್ತಿದ್ದಾರೆ. ಬಾರತದಲ್ಲಿ 21 ಲಕ್ಷಜನರು ಬಲಿಯಾಗುತ್ತಿದ್ದಾರೆ ಭಾರತದಲ್ಲಿ 5 ವರ್ಷಗಳವಳಗಿನ 1,69,500 ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕಾವಡಿ ಕಳವಳ ವ್ಯಕ್ತಪಡಿಸಿದರು. ವಾಯು ಮಾಲಿನ್ಯ ಹೋಗಲಾಡಿಸಲು ಬೃಹತ್ ಪ್ರಮಾಣದಲ್ಲಿ ಮರಗಿಡ ಬೆಳೆಸಿ ವಾಯು ಮಾಲಿನ್ಯ ಹೋಗಲಾಡಿಸಲು ಸಹಾಯವಾಗುತ್ತದೆ ಎಂದರು. ಸಂಸ್ಥೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾಶೆಟ್ಟಿ ಇವರ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು. ಶಾಲಾ ಮುಖ್ಯಗುರುಗಳಾದ ವಿಜಯಕುಮಾರ ಪ್ರಾಸ್ಥಾವಿಕ ಮಾತನಾಡಿದರು. ಸಹಶಿಕ್ಷಿಯಾದ ಈರಮ್ಮ, ಸಾವಿತ್ರಿ, ದೈಹಿಕ ಶಿಕ್ಷಕರಾದ ರಾಘವೇಂದ್ರ, ದಯಾನಂದ, ಉಪಸ್ಥಿತರಿದ್ದರು. ಮಹೇಶ ಮುಸ್ತಾಪೂರ ಸ್ವಾಗತಿಸಿ ವಂದಿಸಿದರು.