ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ
ಕೊಲ್ಹಾರ:ಜೂ.27: ಈಚಿನ ದಿನಗಳಲ್ಲಿ16ರಿಂದ 20 ವರ್ಷದ ಯುವಕರುಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಹೆಣು- ಗಂಡು ಎಂಬ ಭೇದವಿಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯ ಇದರಿಂದ ಹಾಳಾಗುತ್ತಿದೆ ಎಂದು ಪಿಎಸ್‍ಐ ಪ್ರವೀಣ್ ಗೆರೆಬಾಳ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಪೆÇಲೀಸ್ ಇಲಾಖೆ ಇಂದ ಆಯೋಜಿಸಲಾದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆಯ ಅಂಗವಾಗಿ ಮಾದಕ ವಸ್ತುಗಳ ನಿಷೇಧ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು ಮಕ್ಕಳನ್ನು ದಾರಿತಪ್ಪದಂತೆ ನೋಡಿಕೊಳ್ಳಲು ಪಾಲಕರು ಕುಟುಂಬದಲ್ಲಿ ಸೌಹಾರ್ದ ವಾತಾವರಣ ಮೂಡಿಸಬೇಕು. ಮನೆಯಲ್ಲಿ ಆರೋಗ್ಯಕರ ಪರಿಸರ ಇರಬೇಕು ಎಂದು ಅವರು ಸಲಹೆ ನೀಡಿದರು.
ಕುಟುಂಬ ಪ್ರೀತಿಯಿಂದ ವಂಚಿತರಾದವರೇ ಹೆಚ್ಚಾಗಿಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಹಿರಿಯರ ಮಾರ್ಗದರ್ಶನ ದೊರೆತರೆ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಇಲ್ಲದಿದ್ದರೆ ಸಮಾಜ ವಿರೋಧಿ ಶಕ್ತಿಗಳ ಜತೆ ಸೇರುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಚವ್ಹಾಣ ಮಾತನಾಡಿದರು. ಈ ಸಂದರ್ಭದಲ್ಲಿ ಮಂಜುನಾಥ್ ಮಟ್ಟಿಹಾಳ,ರಮೇಶ್ ತೋಟದ,ಶ್ರೀಮತಿ ಡಂಬಳ, ಶೀಲಾ ಮಠಪತಿ,ಹಾಗೂ ಪೆÇಲೀಸ ಸಿಬ್ಬಂದಿ ಬಸಯ್ಯ ಮಠಪತಿ,ಮಮದಾಪೂರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ತಿತರಿದ್ದರು,