ಮುರಳಿಧರ ಕುಲಕರ್ಣಿಗೆ ಶಿಕ್ಷಣ ಮತ್ತು ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ
ಕೊಲ್ಹಾರ: ಜೂ.27:ಬೆಂಗಳೂರಿನ ರಾಜಾಜಿನಗರದ ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತೀರುವ ಕೊಲ್ಹಾರ ಪಟ್ಟಣದ ಚಿತ್ರಕಲಾ ಶಿಕ್ಷಕ ಮುರಳಿಧರ ಕುಲಕರ್ಣಿಗೆ ಶಿಕ್ಷಣ ಮತ್ತು ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಜೂ.23 ರಂದು ಮೈಸೂರಿನ ಪುರಭವನ(ಟೌನ್ ಹಾಲ್ ) ನಲ್ಲಿ ನಡೆದ ಮೈಸೂರ ಪ್ರೆಸ್ ಕ್ಲಬ್ ನ 17 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ 2024 ನೇ ಸಾಲಿಗೆ ಕೊಡಮಾಡುವ ಶಿಕ್ಷಣ ಮತ್ತು ಸಮಾಜ ಸೇವಾ ರತ್ನ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಮೇಲುಕೋಟೆ ವಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿಗಳು,ಉದ್ಘಾಟನೆ ನೇರವೇರಿಸಿದ ರಘುರಾಮ ವಾಜಪೇಯಿ,ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಎಸ್.ವೆಂಕಟೇಶ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ.ಸೀತಾರಾಮೇಗೌಡ,ಮಡಿಕೇರಿ ಗೋಪಾಲ ವಿತರಿಸಿದರು.