ಅಲ್ಲಾಭಾಷ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ:ಪರ್ಕುಂದ ಬೇಗಂ
ಸೈದಾಪುರ:ಜೂ.27:ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ ಹಾಗೂ ಪೆನ್ನುಗಳನ್ನು ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳ ಕಲಿಕೆ ಪ್ರೋತ್ಸಾಹ ನೀಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಅಲ್ಲಾಭಾಷ ಹಿಚಗೇರಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮುಖ್ಯಗುರು ಪರ್ಕುಂದ ಬೇಗಂ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಉರ್ದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಲ್ಲಾಭಾಷ ಹಿಚಗೇರಿ ನೀಡಿದ ಉಚಿತ ನೋಟ ಬುಕ ಹಾಗೂ ಪೆನ್ನುಗಳನ್ನು ವಿತರಣೆ ಮಾಡಿ ಮಾತನಾಡಿದರು. ಶಾಲಾ ಅಭಿವೃದ್ಧಿಗೆ ಸಮೂದಾಯದ ಸಹಕಾರ ಅತಿ ಮುಖ್ಯವಾಗಿದೆ ಈ ದಿಸೆಯಲ್ಲಿ ಉಚಿತವಾಗಿ ತಮ್ಮ ಸ್ವ ಆಸಕ್ತಿಯೊಂದಿಗೆ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದೂ ಇದರ ಸರಿಯಾದ ಸದುಪಯೋಗ ನಾವು ಪಡೆದುಕೊಂಡು ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಎಸ್‍ಡಿಎಂಸಿ ಅಧ್ಯಕ್ಷ ಅಲ್ಲಾಭಾಷ ಹಿಚಗೇರಿ, ಶಿಕ್ಷಕರಾದ ಖಾಜಾ ಬೇಗಂ, ಹಸೀನಾ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.