ಕಸಾಪ ವತಿಯಿಂದ ಡಾ. ಕಮಲಾ ಹಂಪನಾರವರಿಗೆ ನುಡಿನಮನ
ಇಂಡಿ:ಜೂ.27:ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಇಂಡಿ ವತಿಯಿಂದ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾರವರಿಗೆ ಕ.ಸಾ.ಪ ಕಛೇರಿಯಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು.
ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತಿ ಡಿ.ಎನ್.ಅಕ್ಕಿಯವರು ಹಂಪನಾರವರ ಕುರಿತು ಮಾತನಾಡಿ ಹಂಪನಾ ದಂಪತಿಗಳ ಜೊತೆಗಿನ ಸಾಹಿತಿಕ ಒಡನಾಟವನ್ನು ಮೇಲಕು ಹಾಕಿದರು. ಸಾಹಿತಿ ಆರ್.ವ್ಹಿ.ಪಾಟೀಲ ಕ.ಸಾ.ಪ ಕಾರ್ಯದರ್ಶಿ, ಶ್ರೀಮತಿ.ಪಾರ್ವತಿ ಸೊನ್ನದರವರು ನುಡಿನಮನ ಸಲ್ಲಿಸಿದರು.
ಕ.ಸಾ.ಪ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ ಡಾ.ಕಮಲಾ ಹಂಪನಾರವರು ಅವರ ಪತಿಯಾದ ಡಾ.ಹಂಪನಾರವರಿಗೆ ಅನುಕೂಲ ಸತಿಯಾಗಿದ್ದು. ಹಾಗೆಯೇ ಡಾ.ಹಂಪನಾರವರು ತಮ್ಮ ಸತಿಗೆ ಅನುಕೂಲ ಪತಿಯಾಗಿದ್ದರು. ಈರ್ವರ ಸಾಹಿತಿಕ ಜೋಡಿ ಸಾಹಿತ್ಯ ವಲಯದಲ್ಲಿ “ಜಕ್ಕವಕ್ಕಿ”ಗಳ ಹಾಗೆ ಇದ್ದರು. ಇವರ ಅಗಲಿಕೆ ಕನ್ನಡ ಸಾಹಿತ್ಯ ವಲಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆಯೆಂದು ನುಡಿ-ನಮನ ಸಲ್ಲಿಸಿದರು.
ಸಭೆಯಲ್ಲಿ ಕ.ಸಾ.ಪ ಕಾರ್ಯದರ್ಶಿ ಅಹ್ಮದ ವಾಲಿಕಾರ, ಕೆ.ಎನ್.ಬಿರಾದಾರ, ಶ್ರೀಮತಿ.ಜಯಶ್ರೀ ತೆಲಗ, ಶ್ರೀಮತಿ.ಗೀತಾ ಹಿರೇಮಾಳ, ಪವನ ಗಜಾಕೋಶ ಭಾಗವಹಿಸಿದ್ದರು. ಕ.ಸಾ.ಪ ಖಜಾಂಚಿ ವಾಯ್.ಟಿ.ಪಾಟೀಲ ಸ್ವಾಗತಿಸಿ ವಂದಿಸಿದರು.