ಸೈಕಲ್ ಮೂಲಕ ಶಿವಾನಂದ 12 ಜ್ಯೋತಿಲಿರ್ಂಗ ಯಾತ್ರೆ
ಬೀದರ:ಜೂ.27:ಕರ್ನಾಟಕದ ಶಿವಾನಂದ 12 ಜ್ಯೋತಿಲಿರ್ಂಗಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಕರ್ನಾಟಕದ ತುಮಕೂರು ಜಿಲ್ಲೆಯ ಶ್ರೀ ಕ್ಷೇತ್ರ ಶ್ವೇತ ಕಮಠಾಪುರಿ ಬೆಳ್ಳಾವಿ ಗ್ರಾಮದಿಂದ ಜೂನ್ 2 ರಂದು ಪ್ರಾರಂಭವಾದ ಸೈಕಲ್ ಯಾತ್ರೆ ಮಂಗಳವಾರ ಬೀದರ ತಲುಪಿತು. ನಗರದ ನರಸಿಂಹ ಝರನಾ, ಗುರುದ್ವಾರಾ ಹಾಗೂ ಪಾಪನಾಶ ದೇವಸ್ಥಾನದ ದರ್ಶನ ಪಡೆದುಕೊಂಡಿದ್ದಾರೆ.
12 ಜ್ಯೋತಿಲಿರ್ಂಗಗಳ ಸೈಕಲ್ ಯಾತ್ರೆ ಸುಮಾರು 13 ಸಾವಿರ ಕಿಲೋಮೀಟರ್ ಆಗಲಿದೆ ಎಂದರು. ಕರ್ನಾಟಕದಿಂದ ರಾಮೇಶ್ವರಂಗೆ, ರಾಮೇಶ್ವರದಿಂದ ಶ್ರೀಶೈಲಕ್ಕೆ, ಶ್ರೀಶೈಲದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಗುಜರಾತ್‍ಗೆ, ಗುಜರಾತ್‍ನಿಂದ ಮಧ್ಯಪ್ರದೇಶಕ್ಕೆ, ಮಧ್ಯಪ್ರದೇಶದಿಂದ ಜಾಖರ್ಂಡ್‍ಗೆ, ಜಾಖರ್ಂಡ್‍ನಿಂದ ವಾರಣಾಸಿಗೆ ಮತ್ತು ಅಂತಿಮವಾಗಿ ವಾರಣಾಸಿಯಿಂದ ಕೇದಾರನಾಥಕ್ಕೆ ಈ ಪ್ರವಾಸ ಸಾಗಲಿದೆ ಎಂದು ಶಿವಾನಂದ್ ಅವರು ಪ್ರಕಟಣೆಯಲ್ಲಿ ಈವರೆಗೆ 2300 ಕಿಲೋಮೀಟರ್ ಪೂರೈಸಿದ್ದೇನೆ ತಿಳಿಸಿದ್ದಾರೆ.