ಗ್ರಾಪಂ ಹಂಗಾಮಿ ಅಧ್ಯಕ್ಷೆ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಉಪ ಚುನಾವಣೆ ಸೂಸೂತ್ರ ನಡೆಸಲು ಎಸ್ಪಿ ಗೆ ಮನವಿ
ಕಲಬುರಗಿ:ಜೂ.27: ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದ ಸ್ವಪ್ನಾ ನಿಂಗರಾಜ ಕಡಿ ಅವರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜೇವರ್ಗಿ ದಲಿತ ಸಂಘಟನೆಗಳ ದಲಿತ ಸಮನ್ವಯ ಸಮಿತಿ ಪಧಾದಿಕಾರಿಗಳು ಎಸ್ಪಿಗೆ ಬುಧುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹರಿ ಕರಕಿಹಳ್ಳಿ, ಸಿದ್ದರಾಮ ಕಟ್ಟಿ, ಸಿದ್ದು ಕೆರೂರು, ಭೀಮರಾಯ ನಗನೂರ,ಶ್ರೀಶೈಲ ಜಾಲವಾದ, ಜಗನ್ನಾಥ ಸೂರ್ಯವಂಶಿ, ಮಂಜುನಾಥ ನಾಲವಾರಕರ್, ಅಬ್ದುಲ ಹನಿ,ಶಿವಶರಣ ಆಂದೋಲಾ,ರೇವಣಸಿದ್ದ ಬಿರಾಳ ಹಾಗೂ ಅರಳಗುಂಡಗಿ ಗ್ರಾಮದ ಮುಖಂಡರು ಇದ್ದರು.