ನಾಡ ಕಛೇರಿಗೆ ಕುಡಿಯುವ ನೀರು-ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮನವಿ
ಕಲಬುರಗಿ,ಜೂ.27: ನಗರದ ನಾಡ ಕಛೇರಿಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಹಾಗೂ ಹಳ್ಳಿಗಳಿಂದ ಬಂದಂತಹ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಸಚಿವರಾದ ಕೃಷ್ಣಭೈತೆಗೌಡರಿಗೆ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನಗÀಗರದ ನಾಡ ಕಛೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಲುವಾಗಿ ಬರುವ ಸಾರ್ವಜನಿಕರಿಗೆ ವಾಹನಗಳ ನಿಲುಗಡೆ ಮಾಡಲು ಸರಿಯಾದ ವ್ಯವಸ್ಥೆ ಇರುವುದಿಲ್ಲ ಇದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲಿ ಬೇಕಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಅಲ್ಲದೆ ಹಳ್ಳಿಗಳಿಂದ ಬರುವಂತಹ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಪ್ರಮಾಣ ಪತ್ರಗಳನ್ನು ನಾಡಕಚೇರಿಯಿಂದಲೇ ವಿತರಣೆ ಮಾಡುವುದು ಮತ್ತು ಖಾಸಗಿ ವೆಬ್‍ಸೈಟನ್ನು ಆನ್‍ಲೈನ್‍ಗಳಲ್ಲಿ ನೀಡಿಲು ಅನುಕೂಲ ಮಾಡಿಕೊಟ್ಟಲ್ಲಿ ಹಳ್ಳಿಯಿಂದ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಲ್ಲಿಂದ ಇಲ್ಲಿಂದ ಅಲೆದಾಡುವ ಪರಿಸ್ಥಿತಿ ತಪ್ಪುತ್ತದೆ.
ಖಾಸಗಿ ಕಂಪ್ಯೂಟರ ಕೇಂದ್ರಗÀಳಲ್ಲಿ ಪ್ರಮಾಣ ಪತ್ರಗಳ ಪ್ರಿಂಟ್ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು ಈ ರೀತಿಯ ಪ್ರಮಾಣ ಪತ್ರಗಳ ಪ್ರಿಂಟ್ ಅಥವಾ ಪ್ರಮಾಣ ಪತ್ರಗಳನ್ನು ಅರ್ಜಿಸಲ್ಲಿಸಲು ವಿಳಂಬವಾಗುವದರಿಂದ ಈ ಕಛೇರಿಯ ಮುಂದೆ ದಲ್ಲಾಳಿಗಳÀ ಹಾವಳಿ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಕಛೇರಿಯಲ್ಲಿ ಸಂಭಂಧಪಟ್ಟ ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಿದಲ್ಲಿ ದಲ್ಲಾಳಿಗಳÀ ಹಾವಳಿಗೆ ಕಡಿವಾಣ ಹಾಕಬೇಕು ಎಂದು ದತ್ತು ಭಾಸಗಿ ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಅವರೋಂದಿಗೆ ರಾಮಾ ಪೂಜಾರಿ, ಮುಲ್ಲಾ ಆಲಗೂಡ, ಹುಸೇನ, ಸಂಜೀವ ಮಾಳಗೆ, ನಂದಕುಮಾರ ಇದ್ದರು.