ದೂರದೃಷ್ಟಿತ್ವದ ಯೋಜನಾ ನಿಪುಣ ಕೆಂಪೇಗೌಡರು:ಸಂತೋಷ ಬಂಡೆ
ಇಂಡಿ:ಜೂ.27: ಕೆಂಪೇಗೌಡರು ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟು, ಬೆಂಗಳೂರು ನಗರವನ್ನು ನಿರ್ಮಿಸಿ,
ಸರ್ವಧರ್ಮ ಸಹಿಷ್ಣುತೆಯ ಪ್ರಜಾನಾಯಕರಾಗಿದ್ದು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡರ ವಿವೇಚನಾಯುತ ಯೋಜನೆ ಮತ್ತು ಕತೃತ್ವಶಕ್ತಿಯ ವ್ಯಕ್ತಿತ್ವ ಎಲ್ಲರಿಗೂ ಪ್ರೇರಕಶಕ್ತಿಯಾಗಿದೆ.
ಅವರು ಯೋಜನಾನಿಪುಣ ಹಾಗೂ ವಿಚಾರವಾದಿಯಾಗಿ ದೂರದೃಷ್ಟಿತ್ವದೊಂದಿಗೆ ಬೆಂಗಳೂರು ನಗರ ನಿರ್ಮಾಣ ಮಾಡಿದ್ದು ಐತಿಹಾಸಿಕವಾಗಿದೆ ಎಂದು ಹೇಳಿದರು.
ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ,
ಶತಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದು, ಅವರ ದೂರದೃಷ್ಟಿತ್ವದ ಆಡಳಿತ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಐಟಿ ಬಿಟಿ ಕಂಪನಿಗಳ ತವರೆನಿಸಿಕೊಂಡಿದೆ. ಬೆಂಗಳೂರು ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು. ಆಯಾ ಕುಲ ಕಸಬುದಾರರಿಗೆ ಪೇಟೆಗಳನ್ನು ಕಟ್ಟಿಕೊಟ್ಟು, ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದರು ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎ ಎಂ ಬೆದ್ರೇಕರ ಹಾಗೂ ಶಿಕ್ಷಕರಾದ ಎಸ್ ಎಸ್ ಅರಬ,ಜೆ ಎಂ ಪತಂಗಿ, ಎಸ್ ಎಂ ಪಂಚಮುಖಿ, ಎಸ್ ಬಿ ಕುಲಕರ್ಣಿ, ಸಾವಿತ್ರಿ ಸಂಗಮದ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಎಸ್ ವ್ಹಿ ಬೇನೂರ, ಎಫ್ ಎ ಹೊರ್ತಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.