ಸ್ವಚ್ಛತೆ ಆದ್ಯತೆ ನೀಡಿ, ಶುದ್ಧವಾದ ನೀರು ಪೂರೈಸಿ: ಇಒ ರೇವಣಸಿದ್ಧಪ್ಪ ಕೆ.ಗೌಡರ್
ಜೇವರ್ಗಿ : ಜೂ.27:ಮಳೆಗಾಲ ಪ್ರಾರಂಭವಾಗಿದ್ದು, ಪಿಡಿಓಗಳು ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಜನರಿಗೆ ಶುದ್ಧವಾದ ಕುಡಿಯುವ ನೀರು ಪುರೈಸಿ ಹಾಗೂ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸಾಂಕ್ರಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರೇವಣಸಿದ್ಧಪ್ಪ ಕೆ.ಗೌಡರ್ ಸೂಚನೆ ನೀಡಿದರು.
ಹಳೆ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಹಮ್ಮಿಕೊಂಡಿದ್ದ ಜಲಜೀವನ ಮಿಷನ್, ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹಾಗೂ ಪಂಪ್ ಆಪರೇಟರ್ ಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು, ಮಾತನಾಡಿದರು. ಜನರಿಗೆ ನೀರು ಕಾಯಿಸಿ, ಆರಿಸಿ ಕುಡಿಯಲು ತಿಳಿವಳಿಕೆ ನೀಡಬೇಕು ಮತ್ತು ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.
ನೀರಿನ ಗುಣಮಟ್ಟ ಪರೀಕ್ಷೆಗೆ ಕಿಟ್ ಗಳನ್ನು ನೀಡಲಾಗುತ್ತಿದ್ದು, ಎಲ್ಲಾ ಗ್ರಾಮ ಪಂಚಾಯತಿಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ ಅದರ ಮಾಹಿತಿಯನ್ನು ಡಬ್ಲುಕ್ಯುಎಮ್ ಐಎಸ್ ತಂತ್ರಾಶದಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಹಳ್ಳಿ ಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ನೀರಿನ ಟ್ಯಾಂಕ್, ಗುಮ್ಮಿಗಳನ್ನು ಸ್ವಚ್ಛ ಮಾಡಿ, ಪೈಪ್ ಡ್ಯಾಮೇಜ್ ಕಂಡಲ್ಲಿಬಂದಲ್ಲಿ ಕೂಡಲೇ ರಿಪೇರಿ ಮಾಡಿ ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ತಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಕಿತು ಮಾಡಿದರು.
ನಂತರ ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗುರುಶಾಂತಯ್ಯ ಗದ್ದಗಿ ಮಠ ಅವರು ಮಾತನಾಡಿ, ವಾಂತಿ ಬೇಧಿಯಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ನೀರು ಸರಬರಾಜು ನಿಲ್ಲಿಸಿ ಆ ನೀರನ್ನೂ ಪರೀಕ್ಷೆಗೊಳಪಡಿಸಿ ಕಲುಷಿತ ನೀರು ಎಂದು ಧೃಡಪಟ್ಟಲ್ಲಿ ಕೂಡಲೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ತರಬೇತಿಯಲ್ಲಿ ಸಹಾಯಕ ನಿರ್ದೇಶಕ (ಪಂರಾ) ಸೋಮಶೇಖರ್ ಜಾಡರ್, ಆರ್.ಡಬ್ಲೂ ಎಸ್, ಸಹಾಯಕ ನಿರ್ದೇಶಕ ಶಿವಾನಂದ ಪವಾರ್, ರಸಾಯನ ತಜ್ಞ ಭುಷಣ, ನೀರಿನ ಮಾದರಿಗಾರರಾದ ಚಂದ್ರಕಾಂತ, ಮಾಥಾರ್ಂಡಪ್ಪ ಮತ್ತು ಐಎಸ್ ಎ ತಂಡದ ಸಂತೋಷ ಮೂಲಗೆ ರಾಜಶೇಖರ, ಐಇಸಿ ಸಂಯೋಜಕ ಚಿದಂಬರ್ ಪಾಟೀಲ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಮತ್ತು ಪಂಪ್ ಆಪರೇಟರ್ ಸೇರಿದಂತೆ ತಾಲೂಕಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.