ಸೃಷ್ಟಿಕರ್ತನ ಲೆಕ್ಕಾಚಾರ ಶ್ರೇಷ್ಠವಾದುದು: ಹಾರಕೂಡ ಶ್ರೀ
ಬೀದರ್:ಜೂ.27: ಸೃಷ್ಟಿಕರ್ತನ ಲೆಕ್ಕಾಚಾರ ಶ್ರೇಷ್ಠವಾದುದು, ಸೃಷ್ಟಿಯ ಸೂಜಿಗದೆದುರು ಎಲ್ಲವೂ ಗೌಣ.
ಪ್ರಕೃತಿ ನಿಯಮ ಪಾಲನೆಯಿಂದ ದೈವಾನುಗ್ರಹದ ಭವ್ಯಸೌಧ ಪ್ರವೇಶಿಸುಬಹುದಾಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಎಕಲೂರು ಗ್ರಾಮಸ್ಥರಿಂದ ಏರ್ಪಡಿಸಿದ 667ನೇ ತುಲಾಭಾರ ಹಾಗೂ ರಜತ ಕಿರೀಟ ಧಾರಣೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ದಾನಕ್ಕಿಂತ ದೊಡ್ಡ ಸಂಸ್ಕಾರ ಮತ್ತೊಂದಿಲ್ಲ,
ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದ ಹಣದಲ್ಲಿ ಯೋಗ್ಯತೆಗೆ ತಕ್ಕಂತೆ ಸತ್ ಪಾತ್ರರಿಗೆ ದಾನ ಮಾಡುವುದನ್ನು ರೂಡಿಸಿಕೊಳ್ಳಬೇಕು.
ಒಬ್ಬ ಸಂತನಿಗೆ ಉಣ ಬಡಿಸಿದ ಪ್ರಸಾದ ಸಾವಿರ ಜನರ ಊಟಕ್ಕೆ ಸಮ, ಸಂತನೋರ್ವನು ಸೇವಿಸಿದ ಹಿಡಿ ಆಹಾರದಿಂದ ಉತ್ಪತ್ತಿಯಾದ ಶಕ್ತಿ ಸಮಾಜದ ಒಳತಿಗಾಗಿ ಅರ್ಪಿತವಾಗುತ್ತದೆ ಎಂಬ ಸೂಕ್ಷ್ಮ ಅಂಶ ಮನಗಾಣಬೇಕು.
ಜಗತ್ತಿನಲ್ಲಿ ಜಲ, ಅನ್ನ, ಸುಭಾಷಿತ ಇವು ರತ್ನ ತ್ರಯಗಳಾಗಿದ್ದು ಬಹಳ ಜಾಗೃತಿಯಿಂದ ಹಿತಮಿತವಾದ ಬಳಕೆ ಉಚಿತವಾದುದು.
ಏಕ ಸ್ವರದಿಂದ ಮಾಡಿದ ಎಕಲೂರ ಗ್ರಾಮಸ್ಥರ ಭಕ್ತಿ ಸೇವೆ ನಮಗೆ ಸಂತೃಪ್ತಿ ತಂದಿದ್ದು, ಎಲ್ಲರ ಬಾಳಲ್ಲಿ ಪರತತ್ವದ ಚೈತನ್ಯ ಉಕ್ಕಿ ಹರಿಯಲಿ ಎಂದು ಶುಭ ಹಾರೈಸಿದರು.
ರೇವಣಸಿದ್ದಯ್ಯ ಸ್ವಾಮಿ ಸ್ವಾಗತಿಸಿದರು.
ಕಲ್ಯಾಣರಾವ ಲಕ್ಮಣಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಸವರಾಜ ರಾವೂರ ವಂದಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ರಾಜಕುಮಾರ ರಾವೂರ, ಚಂದ್ರಕಾಂತ ರಾವೂರ, ಬಸವರಾಜ ಪೆÇೀತೆ, ಘಂಟೆಪ್ಪ ಪೆÇೀಲಿಸಪಾಟೀಲ, ರಾಜಕುಮಾರ ಪೆÇೀಲಿಸಪಾಟೀಲ, ನಾಗಣ್ಣ ಮಾಲಿ ಬಿರಾದಾರ, ಬಸವರಾಜ ಮಾಲಿ ಬಿರಾದಾರ, ತುಕಾರಾಮ ಜೋಗೆ, ಜಮಾದಗ್ಮಿ ದೊಮೆ, ಕಲ್ಯಾಣರಾವ ಮುಡುಬಿ, ನಾಗಣ್ಣ ಜಾoಜೆ, ಮಹಾದೇವಪ್ಪ ಮಾಲಿ ಬಿರಾದಾರ, ಬಸವರಾಜ ಮಹಾಗಾಂವ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಕಲೂರ ಗ್ರಾಮಸ್ಥರ ವತಿಯಿಂದ ಹಾರಕೂಡ ಪೂಜ್ಯರಿಗೆ ಬೆಳ್ಳಿ ಕಿರೀಟ ಧಾರಣೆ ಹಾಗೂ 667ನೇ ತುಲಾಭಾರ ಜರುಗಿತು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರಿಗೆ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.