ರೋಟರಿ ಕ್ಲಬ್ ಪದಾಧಿಕಾರಿಗಳ ಆಯ್ಕೆ
ಬ್ಯಾಡಗಿ,ಜೂ.27: ಪಟ್ಟಣದ ರೋಟರಿ ಕ್ಲಬ್ ಬ್ಯಾಡಗಿಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2024 25 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರಾಗಿ ಎಸ್ ಎಂ ಬೂದಿಹಾಳಮಠ, ಕಾರ್ಯದರ್ಶಿಯಾಗಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿಯಾಗಿ ವೀರೇಶ ಬಾಗೋಜಿ, ಉಪಾಧ್ಯಕ್ಷರಾಗಿ ಕಿರಣ ವೆರ್ಣೇಕರ್, ಜಂಟಿ ಕಾರ್ಯದರ್ಶಿಯಾಗಿ ಚಂದ್ರಶೇಖರ ಗಾಣಿಗೆರ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದು, ನೂತನ ಪದಾಧಿಕಾರಿಗಳ ಒಂದು ವರ್ಷದ ಅಧಿಕಾರ ಅವಧಿ ಉತ್ತಮ ಸಮಾಜ ಪರ ಸೇವಾ ಕಾರ್ಯಗಳೊಂದಿಗೆ ಕೂಡಿರಲಿ ಎಂದು ಸರ್ವ ಸದಸ್ಯರೊಂದಿಗೆ ಶುಭ ಕೋರಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಪರಶುರಾಮ ಮೇಲಗಿರಿ, ಮಾಲತೇಶ ಅರಳಿಮಟ್ಟಿ, ಬಸವರಾಜ ಸುಂಕಾಪುರ, ಡಾ.ಎ.ಎಂ.ಸೌದಾಗರ, ಶಿವರಾಜ ಚೂರಿ, ಸುರೇಶ ಗೌಡರ, ವಿಶ್ವನಾಥ ಅಂಕಲಕೋಟಿ, ಮಹಾಂತೇಶ ಮೇಲ್ಮುರಿ, ಜೆ.ಎಚ್.ಪಾಟೀಲ, ಮಾಲತೇಶ ಉಪ್ಪಾರ ಹಾಗೂ ಸದಸ್ಯರಾದ ಡಾ.ಎಸ್.ಎನ್.ನಿಡಗುಂದಿ, ಡಾ.ಪುಟ್ಟರಾಜ, ಡಾ.ನಾಗರಾಜ, ಡಾ. ಬಸವರಾಜ ಗೊಂದಿ, ಡಾ. ಸುರೇಶ ಗುಂಡಪಲ್ಲಿ, ಮಹಾಂತೇಶ ಬಂದಮ್ಮನವರ, ಪವಾಡಪ್ಪ ಆಚನೂರ, ಪ್ರಕಾಶ ಪಟ್ಟಣಶೆಟ್ಟಿ ಮಲ್ಲಿಕಾರ್ಜುನ ಕೆಂಬಿ, ಸತೀಶ ಅಗಡಿ, ರಾಘವೇಂದ್ರ ಮಳ್ಳಪ್ಪನವರ, ಮಹಾಂತೇಶ ಸುಂಕದ, ಮಾಲತೇಶ ಕಲ್ಯಾಣಿ, ಬಿ.ಎಸ್.ಪಾಟೀಲ, ಎಚ್.ಡಿ.ಶಾಂತಕುಮಾರ, ಮಹೇಶ್ವರಿ ಪಸಾರದ, ವಿಜಯ ವಾಲಿಶೆಟ್ಟರ, ಮಹೇಶ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.