ಆಸ್ಪತ್ರೆ, ಶಾಲೆ, ವಸತಿ ನಿಲಯಗಳಿಗೆ ಲೋಕಾಯುಕ್ತರ ಭೇಟಿಹಾಸ್ಟೆಲ್ ಅವ್ಯವಸ್ಥೆಗೆ ಆಕ್ರೋಶ, ಸಂತಪೂರ ಆಸ್ಪತ್ರೆಗೆ ಮೆಚ್ಚುಗೆ
ಔರಾದ್ :ಜೂ.27: ಪಟ್ಟಣ ಸೇರಿದಂತೆ ತಾಲೂಕಿನ ಸಂತಪೂರ, ಜಂಬಗಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ಪೆÇಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ, ಹಾಸ್ಟೆಲ್‍ನಲ್ಲಿನ ಅವ್ಯವಸ್ಥೆ ಕಂಡು ವಸತಿ ನಿಲಯದ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್‍ನಲ್ಲಿ ಸಮರ್ಪಕವಾದ ಮೂಲ ಸೌಲಭ್ಯಗಳಿಲ್ಲ. ಕಳಪೆ ಅಡುಗೆ ಮಾಡುವುದರಿಂದ ಮಕ್ಕಳು ಊಟ ಮಾಡುವುದಿಲ್ಲ. ಕಾವಲುಗಾರರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಅಡುಗೆ ಸಿಬ್ಬಂದಿಗಳು ಸರಿಯಾಗಿ ಅಡುಗೆ ಮಾಡುತ್ತಿಲ್ಲ. ವಾರ್ಡನ್ ಸರಿಯಾಗಿ ವಿದ್ಯಾರ್ಥಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಿಚ್ಚಿಟ್ಟರು. ಮಕ್ಕಳು ವಸತಿಯಲ್ಲಿಯೇ ಶೌಚಾಲಯಕ್ಕೆ ಹೋಗಬೇಕು. ತೊಂದರೆ ಆಗದಂತೆ ತಾವುಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಹಾಸ್ಟಲ್‍ನಲ್ಲಿ ಸ್ವಚ್ಛತೆ ಇಲ್ಲದಿರುವದನ್ನು ಕಂಡ ಲೋಕಾಯುಕ್ತ ಪೆÇಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಅವರು ವಾರ್ಡನ್‍ಗಳಿಗೆ ತರಾಟೆ ತೆಗೆದುಕೊಂಡರು.
ವಸತಿ ನಿಲಯದಲ್ಲಿ ವಾಟರ್ ಫಿಲ್ಟರ್ ಇದ್ದರೂ ಶುದ್ಧ ಕುಡಿಯುವ ನೀರು ಇಲ್ಲ ಎಂದು ವಿದ್ಯಾರ್ಥಿಗಳು ಗಮನಕ್ಕೆ ತಂದರು. ಇದರಿಂದ ವಾರ್ಡನ್ ಹಾಗೂ ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲಸ ಮಾಡಲು ಆಗದಿದ್ದರೆ ಮನೆಗೆ ಹೋಗಿ ಎಂದು ವಾರ್ಡನ್‍ಗಳಿಗೆ ಎಚ್ಚರಿಕೆ ನೀಡಿದರು.
ಸಂತಪೂರ ಆಸ್ಪತ್ರೆ ಬಗ್ಗೆ ಮೆಚ್ಚುಗೆ
ತಾಲೂಕಿನ ಸಂತಪೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ಪೆÇಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಅವರು ಆಸ್ಪತ್ರೆ ಸುತ್ತಾಡಿ ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಛತೆ, ಕಡತಗಳು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಂತಪೂರ ಆಸ್ಪತ್ರೆಯೂ ಮಾದರಿಯಾಗಿದೆ ಎಂದು ಆಸ್ಪತ್ರೆಯ ವೈದ್ಯ, ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಂಬಗಿ ಶಿಕ್ಷಕರ ಮೇಲೆ ಆಕ್ರೋಶ
ತಾಲೂಕಿನ ಜಂಬಗಿ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಲೋಕಾಯುಕ್ತ ಪೆÇೀಲಿಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಮಕ್ಕಳ ಮೌಲ್ಯಮಾಪನ ಮಾಡಿದರು. ಈ ವೇಳೆ ಮಕ್ಕಳು ಕಲಿಕೆಯಿಂದ ತೀರ ಹಿಂದುಳಿದಿರುವುದು ಕಂಡು ಬಂತು. ಇದನ್ನು ಗಮನಿಸಿದ ಅವರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳು ಕಲಿಕೆಯಲ್ಲಿ ಅಭಿವೃದ್ಧಿಯಾಗಬೇಕು ಇಲ್ಲವಾದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಕೌಡಗಾಂವ ಪ್ರೌಢ ಶಾಲೆಗೆ ಭೇಟಿ ನೀಡಿದ ಲೋಕಾಯುಕ್ತರು ಮಕ್ಕಳ ಕಲಿಕೆ ಗುಣಮಟ್ಟ ಕಂಡು ಶಾಲೆಯ ಮುಖ್ಯಗುರು ಬಾಲಿಕಾ ಸೇರಿದಂತೆ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.