ಸಂವಿಧಾನ ವಿರೋಧಿಗಳಿಗೆ ಮತದಾರರಿಂದ ತಕ್ಕ ಪಾಠ
ಹುಮನಾಬಾದ್:ಜೂ.27:ದಲಿತ, ಶೋಷಿತ ಸಮುದಾಯಗಳ ಜನರ ಕಲ್ಯಾಣಕ್ಕೆ ಛತ್ರಪತಿ ಶಾಹು ಮಹಾರಾಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರು ನೀಡಿರುವ ಕೋಡುಗೆ ಅಪಾರವಾಗಿದೆ ಎಂದು ಪೆÇ್ರೀ. ಬಿ. ಕೃಷ್ಣಪ್ಪ ಟ್ರಸ್ಟ್ ಮುಖ್ಯಪಸ್ಥೆ ಇಂದಿರಾ ಕೃಷ್ಣಪ್ಪ
ಪಟ್ಟಣದ ಟೀಚರ್ಸ್ ಕಾಲೋನಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಬುಧವಾರ ನಡೆದ ಛತ್ರಪತಿ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆÇ್ರ. ಬಿ. ಕೃಷ್ಣಪ್ಪ ಜನ್ಮದಿನ ಮತ್ತು ಡಾ. ಸಿದ್ದಲಿಂಗಯ್ಯ ಅವರ ಪರಿನಿಬ್ಬಾಣ ದಿನ ಹಾಗೂ ಸಮಾನತೆಗಾಗಿ ಸಂಘರ್ಷ ದಿನ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಸ್ವಾತಂತ್ರ??ವಾಗಿ ಜೀವನ ಸಾಗಿಸಬೇಕು ಎನ್ನುವ ವಿಷಯವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಶಾಹು ಮಹಾರಾಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಸಲಾತಿ ಜಾರಿಗೊಳಿಸಿ ಶೋಷಿತ ಸಮುದಾಯಗಳ ಜನರು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಅವಕಾಶ ಕಲ್ಪಿಸಿಕೊಟ್ಟ ಮಹಾನ ಚೇತನರು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಶಂಕರ ಮಾವಳ್ಳಿ ಮಾತನಾಡಿ, ಛತ್ರಪತಿ ಶಾಹು ಮಹಾರಾಜರ ಸಹಕಾರದಿಂದ ಡಾ. ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭಾರತ ಸಂವಿಧಾನ ರಚಿಸಿ ತಳ ಸಮುದಾಯಗಳ ಜನರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆ ಎಂದರು.
ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಡಾಕುಳಗಿ ಮಾತನಾಡಿ ಸಂವಿಧಾನ ಬದಲಾಯಿಸುವ ಕುರಿತು ಬಿಜೆಪಿ, ಆರ್‍ಎಸ್‍ಎಸ್ ಹಾಗೂ ನರೇಂದ್ರ ಮೋದಿ ಸಚಿವ ಸಂಪೂಟದ ಕೆಲ ಸಚಿವರು ಸುವ್ಯವಸ್ಥಿತ ಒಳಸಂಚು ಮಾಡುತ್ತಿದ್ದಾರೆ. ಹೀಗಾಗಿ ದಲಿತ, ಶೋಷಿತ ಹಾಗೂ ತಳ ಸಮುದಾಯದ ಜನರು ಒಗ್ಗಟ್ಟಾಗಿ ಸಂವಿಧಾನದ ಸಂರಕ್ಷಣೆಗೆ ಮಾಡಬೇಕು ಎಂದರು.
ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಮಾತನಾಡಿ, ಪೆÇ್ರ. ಬಿ. ಕೃಷ್ಣಪ್ಪ ಮತ್ತು ಡಾ. ಸಿದ್ದಲಿಂಗಯ್ಯ ಸಮಾಜ ಪರಿವರ್ತನೆಗೆ ಚಳುವಳಿಗಳನ್ನು ಆರಂಭಿಸಿ ಆಡಳಿತ ಪಕ್ಷದ ವಿರೋಧ ಪಕ್ಷದಲ್ಲಿ ನಿಂತು ಬಡ ಜನರ ಕಲ್ಯಾಣಕ್ಕೆ ನಿಸ್ವಾರ್ಥ ಸೇವೆ ನೀಡ ಮಹಾನ ಚೇತನರಾಗಿದ್ದಾರೆ ಎಂದರು.
ಬೆಂಗಳೂರಿನ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಪ್ರಾಧ್ಯಾಪಕಿ ಡಾ. ಜಯದೇವಿ ಗಾಯಕ್ವಾಡ, ಜಿಪಂ. ಮಾಜಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ್, ದಲಿತ ಸಂಘಟನೆ ತಾಲೂಕ ಸಂಚಾಲಕ ಕೈಲಾಸ, ಪದ್ಮಾಕರ್ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಪ್ರಾಧ್ಯಾಪಕ ಡಾ. ಜಯಕುಮಾರ ಸಿಂಧೆ, ಮಲ್ಲಿಕಾರ್ಜುನ್ ಮಹೇಂದ್ರಕರ್, ಪ್ರಭು ತಾಳಮಡಗಿ, ರಾಹುಲ್ ಉದ್ದಾ, ಶಿವಾನಂದ ಕಟ್ಟಿಮನಿ, ಲೋಕೇಶ ಮೇತ್ರೆ, ಯುವರಾಜ ಘಂಟೆ ಇದ್ದರು. ಪ್ರಭುರಾವ ಚಿತ್ತಕೋಟ ಸ್ವಾಗತಿಸಿದರು. ಸಿದ್ದಾರ್ಥ ಕಾಂಬಳೆ ನಿರೂಪಿಸಿದರು. ಮಾಣಿಕ ಮಾಡಗೂಳ ವಂದಿಸಿದರು.