ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಬೆಳೆಸಲು ಶಿಕ್ಷಕರಿಗೆ ಕರೆ
ಆಳಂದ:ಜೂ.27: ವಿದ್ಯಾರ್ಥಿ ಓದು ಬರಹದಲ್ಲಿ ಬಲವಾದ ನಂಬಿಕ್ಕೆ ಬರುವಂತೆ ಬೋಧನೆ ಮಾಡಿದರೆ ಮಾತ್ರ ಅವರಲ್ಲಿ ಗುಣಮಟ್ಟದ ಶಿಕ್ಷಣ ಕಾಣಲು ಸಾಧ್ಯ ಎಂದು ಪಂಚಾಯತಿ ಮತ್ತು ಗ್ರಾಮೀಣಾಭೀವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಖರ್ಗೆ ಹೇಳಿದರು.
ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್‍ಡಿಬಿಯಿಂದ ಮಂಜೂರಾದ ಸುಮಾರು 77 ಲಕ್ಷ್ಯ ವೆಚದ ನೂತನ ಕೋಣೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠದ ನಂತರ ಸಲಹೆ ಸೂಚನೆಗಳ ಜತೆಗೆ ಪ್ರಶ್ನೆಗಳನ್ನು ಕೇಳುವುದು ನಿಲ್ಲಿಸಬಾರದು. ಇಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಸಂಕೋಚಿತ ಮನೋಭಾವ ಬೇಡ. ವಿದ್ಯಾರ್ಥಿಗಳ ವೈಪಲ್ಯಗಳನ್ನು ಗುರುತಿಸುವಂತ ಕಾರ್ಯ ಶಿಕ್ಷಕರು ನಿರಂತರ ಮಾಡಬೇಕು. ಇದರಿಂದ ಮಾತ್ರ ಬೇರು ಮಟ್ಟದಲ್ಲಿ ಶಿಕ್ಷಣ ಗಟ್ಟಿಗೊಳಿಸಿಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿ.ಆರ್. ಪಾಟೀಲ್ ಅವರು ಶಿಕ್ಷಣ ಪ್ರೇಮಿಗಳಾಗಿದ್ದು ತಾಲೂಕಿನಲ್ಲಿ ಶಿಕ್ಷಣ ಕ್ರಾಂತೀಯನ್ನು ಹರಡಿಸಿದ್ದಾರೆ. ಅಲ್ಲದೆ ವಿವಿಧ ಇಲಾಖೆಗಳಲ್ಲಿ ಸಿಗುವ ಅನುದಾನಗಳನ್ನು ಅತಿ ಹೆಚ್ಚು ಮಂಜೂರು ಮಾಡಿಸಿಕೋಂಡು ತರುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ನಿಂಬರ್ಗಾ ಗ್ರಾಮವೂ ಅತಿ ದೊಡ್ಡ ಹೋಬಳಿ ಗ್ರಾಮವಾಗಿದ್ದು, ಇಲ್ಲಿ ಡಿಗ್ರಿ ಕಾಲೇಜು ಅವಶ್ಯಕತೆ ಇದ್ದು ಇದನ್ನು ಮಂಜೂರು ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ, ಜಿಪಂ ಸಿಇಒ ಭನವರ ಸಿಂಗ ಮೀನಾ, ಎಸ್‍ಪಿ ಅಕ್ಷಯ ಹಾಕ್ರೆ, ಬಿಇಒ ಸಿ.ಜೆ.ಹಳ್ಳದ, ಮಾಜಿ ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಶರಣು ಭೂಸನೂರ, ಗ್ರಾಪಂ ಗ್ರಾಪಂ ಅಧ್ಯಕ್ಷೆ ರೇಖಾ ರಮೇಶ ಚವ್ಹಾಣ್, ಸಿಆರ್‍ಸಿ ಅಶೋಕ ಗಾಯಕವಾಡ, ಮುಖಂಡ ಶ್ರೀಮಂತ ವಾಗ್ದರ್ಗಿ, ಗುರು ಕಾಮಣಗೋಳ್, ಈರಣ್ಣ ನಾಗಶೆಟ್ಟಿ, ರವಿಕುಮಾರ ಯಳಸಂಗಿ, ಚಂದ್ರಕಾಂತ ಸನಗುಂದಿ, ನಾಗೇಶ ಅಂಕಲಗಿ, ಸೂರ್ಯಕಾಂತ ಕಂಟೆಕೂರ, ಚಂದ್ರಕಾಂತ ಕುಂಬಾರ, ವಿಶ್ವನಾಥ ಮಾಲಿಪಾಟೀಲ್, ಪರಮೇಶ್ವರ ದುಗೊಂಡ, ಮೋಹನ ನಿರ್ಮಲಕರ್, ಬರ್ಮಣ್ಣಾ ಕಾರಬಾರಿ, ರಾಮು ಘೋಡಕೆ, ಸೂರ್ಯಕಾಂತ ಜಿಡಗೆ ಸೇರಿದಂತೆ ಅನೇಕರು ಭಾಗವಹಿಸಿದರು.
ನಂತರ ಹಿತ್ತಲಶಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್‍ಡಿಬಿಯಿಂದ ಮಂಜೂರಾದ ಸುಮಾರು 60 ಲಕ್ಷ್ಯ ರೂ.ವೆಚ್ದ 4 ನೂತನ ಕೋಣೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.