ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ
ಮುನವಳ್ಳಿ,ಜೂ.27: ಪಟ್ಟಣದ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಆವರಣದಲ್ಲಿ ಶ್ರೀ ಆಸ್ಪತ್ರೇಯ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಜರುಗಿತು.
ಡಾ|| ನಯನಾ ಭಸ್ಮೆ ಮಾತನಾಡಿ ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂದಿಸಿದ ಯಾವೂದೆ ಸಮಸ್ಯೆಗಳು ಇದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು, ಮೂಳೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈಧ್ಯಕೀಯ ಕ್ಷೇತ್ರದಲ್ಲಿ ಪರಿಹಾರ ವಿದೆ ಎಂದರು,
ಡಾ|| ಹೆಮಂತ ಭಸ್ಮೆ ಮಾತನಾಡಿ ಜಂಕ್ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಏರುತ್ತಿರುವ ಬೊಜ್ಜು ಒತ್ತಡದ ಬದುಕಿನಲ್ಲಿ ಹೆಚ್ಚು ಕೂತು ಕೆಲಸ ಮಾಡುವುದರಿಂದ ಮೂಳೆ ಮತ್ತು ಕೀಲು ಸಂಬಂಧಿತ ಕಾಯಿಲೆಗಳು ಬಾಧಿಸುತ್ತವೆ ಆರಂಭದಲ್ಲೆ ವೈಧ್ಯರನ್ನು ಭೇಟಿಯಾಗಿ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಮೂಳೆ ಸಂಬಂದಿತ ಕಾಯಿಲೆಗಳನ್ನು ದೂರವಿಡಬಹುದು ಎಂದರು,
ಅಧ್ಯಕ್ಷತೆ ವಹಿಸಿ ಯಶವಂತ ಗೌಡರ ಮಾತನಾಡಿದರು ಒಬ್ಬರ ನೋವನ್ನು ಅರಿತುಕೊಳ್ಳುವ ಗುಣ ಬೆಳೆಸಿಕೊಂಡವರಿಗೆ ಇನ್ನೂಬ್ಬರ ನೋವಿನ ಅರಿವಾಗುತ್ತದೆ ಅದೆ ರೀತಿ ಸಮಾಜದ ನೋವು ನಿವಾರಣೆಯಗಾಗಿ ಆರೋಗ್ಯ ವನ್ನು ಕಾಪಾಡಲು ತಮ್ಮನ್ನು ಸೇವಾಭಾವದೊಂದಿಗೆ ತೊಡಗಿಸಿಕೊಂಡಿರುವ ಭಸ್ಮೆ ದಂಪತಿಗಳ ಕಾರ್ಯ ಶ್ಲಾಘನೀಯ ಎಂದರು.
ಸುರೇಶ ಸೌಮ್ಯ ನೀರಸಾಗರ ಪ್ರಶಾಂತ್ ವಡ್ಲಿ, ಅನುರಾದ ಬೆಟಗೇರಿ, ಅನ್ನಪೂರ್ಣ ಲಂಬೂನವರ, ಅನಸೂಯಾ ಹೊನ್ನಳ್ಳಿ, ಚನಬಸು ನಲವಡೆ, ಸವಿತಾ ಕೆಂದೂರ, ಜಯಕ್ಕ ಹೊನ್ನಳ್ಳಿ, ಚನ್ನವ್ವಕ್ಕ ಹಲಗತ್ತಿ, ಮಂಜುನಾಥ ಬೆಟಗೇರಿ, ಪಂಚನಗೌಡ ಬಿಕ್ಕನಗೌಡ, ಬಸವರಾಜ ಹಲಗತ್ತಿ, ಪ್ರವೀಣ ಪಡಶ್ಯಾವಿಗಿ, ಸೋಮು ಗರಗದ, ವೈ.ಬಿ.ಕಡಕೋಳ, ಶ್ರೀನಿವಾಸ ಕಮ್ಮಾರ, ಇತರರು ಉಪಸ್ಥಿತರಿದ್ದರು.