ವಿದ್ಯಾರ್ಥಿಗಳು ಆತ್ಮಸ್ಥರ್ಯದಿಂದ ಓದಬೇಕು
ಗುಳೇದಗುಡ್ಡ,ಜೂ.27: ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನÉ ನೀಡಬೇಕು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆತ್ಮಸ್ಥೆರ್ಯ, ಛಲ, ಸಾಧನೆಯ ಗುರಿಯೊಂದಿಗೆ ಯಶಸ್ಸು ಗಳಿಸಬೇಕು. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕು ಎಂದು ಕುರುಹಿನಶೆಟ್ಟೆ ಸಮಾಜ ಅಧ್ಯಕ್ಷ ಈರಣ್ಣ ಹಳ್ಳಿ ಹೇಳಿದರು.
ಅವರು ತಾಲೂಕು ಕುರುಹಿನಶೆಟ್ಟಿ ಯುವ ಕುಟುಂಬ ಹಾಗೂ ವಿವಿಧೋದ್ದೇಶ ಸಂಘದ ವತಿಯಿಂದ ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡದ್ದ ಸಮಾಜದ ವಿದ್ಯಾರ್ಥಿಗಳಿಗೆ ನೋಟ ಪುಸ್ತಕ ವಿತರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕುರುಹಿನಶೆಟ್ಟಿ ಯುವ ಕುಟುಂಬದ ಸಂಘಟನೆಯು ನಿರಂತರ ಸಮಾಜಮುಖಿ ಕಾರ್ಯಗಳು ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು. ಕಾರ್ಯಕ್ರಮದಲ್ಲಿ ಸುಮಾರು ಮೂರನೂರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಿಸಲಾಯಿತು.
ಸಂಘದ ಅಧ್ಯಕ್ಷ, ನ್ಯಾಯವಾದಿ ತಮ್ಮಣೆಪ್ಪ ಬೆನಕಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಕುರುಹಿನಶೆಟ್ಟಿ ಯುವ ಕುಟುಂಬ ವತಿಯಿಂದ ನೋಟ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಪಡೆದುಕೊಂಡು ಶಿಕ್ಷಣವಂತರಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಮಾಜಕ್ಕೆ, ಪಾಲಕರಿಗೆ ಕೀರ್ತಿ ತರಬೇಕು. ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ನಿರಂತರ ಅಧ್ಯಯನಶೀಲರಾಗಿ ತಮ್ಮ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಜಿ ವಜ್ರಬಂಡ್ಡಿ, ಶಂಕ್ರಪ್ಪ ಬೀಳಗಿ, ಮಲ್ಲಿಕಾರ್ಜುನ ಮುದೇನೂರ, ಶೇಖರಪ್ಪ ರಂಜನಗಿ, ವಿಜಯಕುಮಾರ ಬೆಟಗೇರಿ, ನಿಂಗಪ್ಪ ಯಂಡಿಗೇರಿ, ಮಹಾಗುಂಡಪ್ಪ ಅರಕಾಲಚಿಟ್ಟಿ, ಮಲ್ಕಪ್ಪ ಸೂಡಿ, ಶರಣಪ್ಪ ಬೆಟಿಗೇರಿ, ಸಂಗಮೇಶ ಚಿಕ್ಕಾಡಿ, ಸಂಗಮೇಶ ಹುನಗುಂದ, ಗೋಪಾಲ ಹಳ್ಳೂರ, ಅರುಣ ದಿಂಡಿ, ಮುರುಗೇಶ ಹುನಗುಂದ, ಅಮರೇಶ ಕೊಳ್ಳಿ, ಬಸವರಾಜ ಬೀಳಗಿ, ಈರಣ್ಣ ಯಲಬುರ್ಗಿ, ಕೂಡ್ಲೇಪ್ಪ ರಂಜನಗಿ, ಮಹಾಗುಂಡಪ್ಪ ಹನಮಸಾಗರ, ಮಲ್ಲು ಇಂಗಳಗಿ ಮತ್ತಿತರರು ಇದ್ದರು.