ಜಿಲ್ಲಾ ಮಣ್ಣು ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ27 : ಕೃಷಿ ಭೂಮಿಯ ನಿರ್ವಹಣೆಯೊಂದಿಗೆ ಮಣ್ಣು ಸಂರಕ್ಷಣೆ ಅಗತ್ಯವಿದ್ದು ಈ ಬಗ್ಗೆ ಮಾಹಿತಿ ನೀಡಲು ಮಣ್ಣು ಆರೋಗ್ಯ ಕೇಂದ್ರದ ಅಗತ್ಯವಿತ್ತು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.
ಹೊಸಪೇಟೆಯ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ 15 ಲಕ್ಷ ರೂಗಳ ಜಿಲ್ಲಾ ಮಣ್ಣು ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ರೈತರು ನಮ್ಮ ಜೀವನಾಡಿಯಾಗಿದ್ದಾರೆ. ಉತ್ತಮ ಕೃಷಿಗೆ ಮಣ್ಣು ಅವಶ್ಯವಿದ್ದು, ಮಣ್ಣಿನ ಪರೀಕ್ಷೆ ಮತ್ತು ಮಣ್ಣಿನ ಬಗ್ಗೆ ಸಾಕಷ್ಟು ಮಾಹಿತಿ ಅರಿತು ರೈತರು ಉತ್ತಮ ಕೃಷಿ ಭೂಮಿಯ ರಕ್ಷಣೆ ಹಾಗೂ ಮುಂದಿನ ಜನಾಂಗಕ್ಕೆ ಉಳಿಸುವುದು ಸೇರಿದಂತೆ ಜಿಲ್ಲಾ ಮಣ್ಣು ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಇದೆ ವೇಳೆ ಶಾಸಕರು, 2024-25ನೇ ಸಾಲಿನ ಕೃಷಿ ಇಲಾಖೆಯ ಯೋಜನೆಯಡಿ ರೈತರಿಗೆ ಪರಿಕರ ಮತ್ತು ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೈತರು, ಮುಖಂಡರುಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.