ಬಳ್ಳಾರಿ ಲಾರೀ ಮಾಲೀಕರ ಸಂಘದಲ್ಲಿಹೊಸ ರಾಜಕೀಯ ಶುರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.27: ಸಧ್ಯ ನಿಷ್ಕ್ರಿಯವಾಗಿರುವ ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದಲ್ಲಿ ಹೊಸ ರಾಜಕೀಯ ಆರಂಭವಾಗಿದೆ. ಪಾಲಿಕೆ ಸದಸ್ಯ ಶ್ರೀನಿವಾಸುಲು ಮಿಂಚು ಅವರು ನೂತನ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆಗಳು ನಗರ ಶಾಸಕರ ಆಶಯದಂತೆ ನಡೆದಿದೆಂದು ಹೇಳಲಾಗುತ್ತಿದೆ.
ನಿನ್ನೆ ದಿನ  ಸಂಘದ ಕಚೇರಿಯಲ್ಲಿ ಸಭೆ ನಡೆಯಿತು. ಹಾಲಿ ಅಧ್ಯಕ್ಷರಾಗಿದ್ದ ಪೆದ್ದನ್ನ ತಮ್ಮ‌ ವಯಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸಿದ್ದರು. ಹಂಗಾಮಿ ಅಧ್ಯಕ್ಷರನ್ನಾಗಿ ಎಂ.ವಿಶ್ವನಾಥಸ್ವಾಮಿ ಅವರನ್ನು ನೇಮಕ ಮಾಡಿಕೊಂಡು. ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕೆಂಬ ಚರ್ಚೆ ನಡೆಯುವಾಗ.ಪಾಲಿಕೆ ಸದಸ್ಯರುಗಳಾದ ಎಂ.ಪ್ರಭಂಜನ್ ಕುಮಾರ, ಮುಂಚು ಶ್ರೀನಿವಾಸಲು, ಕಾಂಗ್ರೆಸ್ ಮುಖಂಡ ಬಿ.ಆರ್.ಎಲ್.ಶೀನ ಅವರುಗಳು ಆಗಮಿಸಿ. ನಗರ ಶಾಸಕರು ಹೇಳಿದ್ದಾರೆ. ನಿಮ್ಮ ಅಸೋಸಿಯೇಷನ್ ಸಮಸ್ಯೆ ಏನಿದೆಂದು ತಿಳಿದುಕೊಳ್ಳಲು ಅದಕ್ಕಾಗಿ‌ಬಂದಿದೆಂದು ನಂತರ ನೀವೆಲ್ಲ ಸರ್ವ ಸಮ್ಮತದಿಂದ ಒಪ್ಪುವುದಾದರೆ ಮಿಂಚು ಶ್ರಿನಿವಾಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಸಂಘವನ್ನು ಕ್ರಿಯಾತ್ಮಕವಾಗಿ ಮಾಡಿ ಲಾರಿ ಮಾಲೀಕರ ಸಮಸ್ಯೆಗಳಿಗೆ ಸ್ಪಂದಿಸಲಿದೆಂಬ ಪ್ರಸ್ತಾವನೆ ಇಡಲಾಯಿತಂತೆ.  ಅಲ್ಲದೆ ಈ ಕುರಿತು‌ ನಗರ ಶಾಸಕರ ಬಳಿ‌ಬಂದು ಚರ್ಚಿಸಿ ಒಂದು ಒಮ್ಮತದ ನಿರ್ಣಯ ಪಡೆಯಲು ಸಹ ಮಾತುಕತೆ ನಡೆಯಿತಂತೆ. ಆಗ ಸಭೆಯಲ್ಲಿದ್ದ ಸದಸ್ಯರು  ಕೆಲ ಪದಾಧಿಕಾರಿಗಳು ಶಾಸಕರ ಬಳಿ ಚರ್ಚಿಸಲು ಸಮ್ಮತಿಸಿದರಂತೆ.
ಆದರೆ ನಂತರ ಈ ರಾಜಕೀಯ ವ್ಯಕ್ತಿಗಳು ನಮ್ಮ ಸಂಘಕ್ಕೆ ಬೇಡ ನಮ್ಮಲ್ಲಿಯೇ ಚುನಾವಣೆ ನಡೆಸಿ ಆಗೋಣ ಎಂಬ ಚರ್ಚೆ ಯೂ ನಡೆಯಿತಂತೆ.
ಈ‌ಮಧ್ಯೆ ಸಹಕಾರ ಸಂಘಗಳ ಉಪ‌ ನಿಬಂಧಕರ ಕಚೇರಿಯಲ್ಲಿ ಸಂಘದ ನೂತನ ಅಧ್ಯಕ್ಷರನ್ನಾಗಿ ಮುಂಚು ಶ್ರೀನಿವಾಸ್ ಅವರು ಸೇರಿದಂತೆ ಇನ್ನಿತರ ಪದಾಧಿಕಾರಿಗಳ ಆಯ್ಕೆ ಯಾದಂತೆ  ದಾಖಲೆಗಳನ್ನು ನೀಡಿದೆ. ಈ ಬಗ್ಗೆ ಚರ್ಚಿಸಲು ಜೂನ್ 29 ರಂದು ದಾಖಲೆ ಸಮೇತ ಬರಲು ಹಾಲಿ ಕಾರ್ಯದರ್ಶಿ ಬಸವರಾಜ್ ಅವರಿಗೆ ಉಪ ನಿಂಭಂದಕರ ಕಚೇರಿಯಿಂದ ಪತ್ರ ಬಂದಿದೆಯಂತೆ. ಆರೀತಿ ನಿರ್ಣಯಿಸಿ ಯಾವುದೇ ದಾಖಲೆ ಸಂಘದಿಂದ ನೀಡಿಲ್ಲ ಎಂಬ ಆಕ್ಷೇಪಣೆ ಸಲ್ಲಿಸಲು ಬಸವರಾಜ್ ಸಿದ್ದರಾಗಿದ್ದಾರಂತೆ.
ಆಂತರಿಕ:
ಸಂಘದ ಹೆಸರಿನಲ್ಲಿರುವ ಎರೆಡು ಎಕರೆ ಜಮೀನಿನಲ್ಲಿ  ಒಂದಿಷ್ಟು ಈಗಾಗಲೇ ಕೆಲವರು ಲೀಜ್ ಪಡೆದಿದ್ದಾರೆ  ಉಳಿದಿರುವುದರ ಮೇಲೆ ಕಣ್ಣು ಬಿದ್ದಿದ್ದು ಆಂತರಿಕವಾಗಿ ಸಂಘದ ಹಿಡಿತಕ್ಕೆ ರಾಜಕೀಯ ಆರಂಭವಾಗಿದೆ ಎನ್ನುತ್ತಿದೆ ಲಾರಿ ಟರ್ಮಿನಲ್ಲಿನ ಚರ್ಚೆ.
ಎಲ್ಲರೂ ಒಪ್ಪಿದರೆ ಆಗುವೆ:
ಜಿಲ್ಲೆಯ ಲಾರೀ‌ಮಾಲೀಕರು ಒಪ್ಪಿದರೆ ಆ ಸಂಘದ ಅಧ್ಯಕ್ಷನಾಗಲು ನಗರ ಶಾಸಕರ ಸೂಚನೆಯಂತೆ ಸಿದ್ದನಿದ್ದೇನೆ. ಅಧ್ಯಕ್ಷ ಆಗಲೇ ಬೇಕು ಎಂದು ನನಗೆ ಆಸೆ ಇಲ್ಲ. ಅವರಲ್ಲಿಯೇ ಯಾರಾದರೂ ಆದರೂ ಸರಿ. ಒಟ್ಟಿನಲ್ಲಿ ಸಂಘ ಸಕ್ರಿಯವಾಗಬೇಕು. ಲಾರೀ ಮಾಲೀಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು
ಮಿಂಚು ಶ್ರೀನಿವಾಸುಲು, ಪಾಲಿಕೆ ಸದಸ್ಯ ಬಳ್ಳಾರಿ