ಬಳ್ಳಾರಿಯಲ್ಲಿ 19 ಕಿಲೋ ಗಾಂಜಾ ವಶ ಇಬ್ಬರ ಬಂಧನ
ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.27: ಇಲ್ಲಿನ  ಸೈಬರ್ ಠಾಣೆಯ  ಪೊಲೀಸರು  ಭರ್ಜರಿ ಕಾರ್ಯಾಚರಣೆ ಮಾಡಿ ಗಾಂಜಾ ಮಾರಾಟ ದಂಧೆಕೊರರನ್ನು ಮಾಲ್‌ ಸಮೇತ ಸೆರೆಹಿಡಿದಿದ್ದಾರೆ.
ಇಬ್ಬರನ್ನ ಬಂಧಿಸಿ, 19 ಕೆ ಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಾಗಿದೆಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಇಂದು ಪತ್ರಿಕಾ ಗೋಷ್ಟಿ ಕರೆದು ತಿಳಿಸಿದ್ದಾರೆ.
ವಾಹೀದ್ (38) ಮತ್ತು ಚಾಂದ್ ಭಾಷಾ  (40) ಎನ್ನುವ ಆರೋಪಿಗಳು ಈ ಪ್ರಕರಣದಲ್ಕಿ ಬಂಧಿಸಲಾಗಿದೆ.
ಬಳ್ಳಾರಿ ನಗರದಲ್ಲಿ ಒಂದು ಗ್ಯಾಂಗ್  ಗಾಂಜಾ ಮಾರಾಟ ದಂಧೆಯಲ್ಲಿ ತುಂಬಾ ಯ್ಯಾಕ್ಟಿವ್  ಆಗಿದೆಂದು ತಿಳಿಸಿದ ಅವರು 
ಕಿಂಗ್ ಪಿನ್ ಸೇರಿ ನಾಲ್ವರು ತಲೆ ಮರೆಸಿಕೊಂಡಿದ್ದಾರೆಂದರು.
ಆಂಧ್ರದ  ಕರ್ನೂಲ್, ಅನಂತಪುರಂ, ರಾಯದುರ್ಗಂ ನಿಂದ ಬಳ್ಳಾರಿಗೆ ತರಲಾಗುತ್ತಿದೆ.  ಅದನ್ನು ನಿಯಂತ್ರಿಸಲು ಹೆಚ್ಚು, ಹೆಚ್ಚು ಗಾಂಜಾ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಪ್ರಸಕ್ತ ವರ್ಷ 13 ಪ್ರಕರಣ ದಾಖಲಾಗಿದೆ. 75 ಕೆಜಿ ಗಾಂಜಾ ವಶಕ್ಕೆ ಪಡೆದು, 18 ಆರೋಪಿಗಳನ್ನ ಬಂಧಿಸಲಾಗಿದೆಂದು ತಿಳಿಸಿದ್ದಾರೆ.