ಕರಕುಶಲ ವಸ್ತುಗಳ ತಯಾರಿಕೆ ಸ್ವಯಂ ಉದ್ಯೋಗವಿದ್ದಂತೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.27: ಕರಕುಶಲ ವಸ್ತುಗಳ ತಯಾರಿಕೆ ಸ್ವಯಂ ಉದ್ಯೋಗವಿದ್ದಂತೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜಸ್ಥಾನ ರಾಜ್ಯದ ಸಂಪನ್ಮೂಲ ವ್ಯಕ್ತಿ ಮಾಧವ ರಾವ್ ಶಾಲೆಗೆ ಭೇಟಿನೀಡಿ ಬಣ್ಣ ಬಣ್ಣದ ಪೇಪರ್ ಕಾಗದದಿಂದ  ವಿವಿಧ ರೀತಿಯ ಹೂಗಳು, ಬುಟ್ಟಿ, ಪಾರಿವಾಳ ಸೇರಿ 25ಕ್ಕೂ ಹೆಚ್ಚು ಮಾದರಿಗಳನ್ನು ಕತ್ತರಿಸಿ ತೋರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರಕುಶಲ ಕಲೆಯನ್ನು ಮೈಗೂಡಿಸಿಕೊಂಡರೆ, ಸ್ವತಃ ನಾವೇ ವಿವಿಧ ಗೃಹಾಲಂಕಾರ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ರಾಷ್ಟ್ರೀಯ ಹಬ್ಬ, ಹರಿದಿನಗಳಲ್ಲಿ ಹಣ ಗಳಿಸಬಹುದು ಮತ್ತು ಉಳಿಸಬಹುದು.
ಸ್ವಯಂ ಉದ್ಯೋಗದಿಂದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಾಡಿ ಕೊಳ್ಳಬಹುದು. ಸ್ವಾವಲಂಬಿ ಜೀವನ ಸಾಗಿಸಬಹುದು ಎಂದು ಹೇಳಿದರು.
ಶಿಕ್ಷಕರಾದ ವಿ.ಬಸವರಾಜ, ದಿಲ್ಷಾದ್ ಬೇಗಂ,ಚನ್ನಮ್ಮ, ಸುಮತಿ, ಸುಧಾ, ವೈಶಾಲಿ, ಶ್ವೇತಾ, ಉಮ್ಮೇಹಾನಿ, ಶಶಮ್ಮ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಅನುಷ ಮುಂತಾದವರು ಉಪಸ್ಥಿತರಿದ್ದರು.