ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆಎಂಎಲ್ ಸಿ ಸತೀಶ್ ಭೂಮಿಪೂಜೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.27: ಕೇಂದ್ರ ಸರ್ಕಾರದ ಮಾಡಲ್‌ ಶಾಲೆಯ ಮಾದರಿಯಲ್ಲಿ  ನಗರದ 10 ನೇ ವಾರ್ಡಿನ ದೊಡ್ಡ ಮಾರ್ಕೆಟ್ ಹತ್ತಿರ  21.50 ಲಕ್ಷ ರೂಪಾಯಿ ವೆಚ್ಚದಲ್ಲಿ  ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇಂದು  ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್  ಭೂಮಿ ಪೂಜೆ ನೆರವೇರಿಸಿದರು.
ನಂತರ ಕಟ್ಟಡವನ್ನು ಉತ್ತಮ‌ಗುಣ ಮಟ್ಟದಿಂದ ಕಟ್ಟಿ ಲೋಪ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಗುತ್ತುಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಗರದ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಪಾಲಿಕೆ ಸದಸ್ಯರಾದ ಕೋನಂಕಿ  ತಿಲಕ್, ಗೋವಿಂದರಾಜುಲು,ಶ್ರೀನಿವಾಸ್ ಮೋತಕ್ಕರ್, ಗೋವಿಂದ, ಆಯುಕ್ತ ಖಲೀಲ್ ಸಾಬ್,  ಇಲಾಖೆಯ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರರು  ಉಪಸ್ಥಿತರಿದ್ದರು.