ಎಐಡಿವೈಓಯುವಜನ ಸಂಘಟನೆಯ 59ನೇ ಸಂಸ್ಥಾಪನ ದಿನ ಅಂಗವಾಗಿ ಸಸಿ ನೆಡುವಕಾರ್ಯಕ್ರಮ.
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.27: ಬಳ್ಳಾರಿಯ ಸರ್ಕಾರಿಕೈಗಾರಿಕಾತರಬೇತಿ ಸಂಸ್ಥೆ ಬಳ್ಳಾರಿಯಲ್ಲಿ ಎ ಐ ಡಿ ವೈ ಓ ಯುವಜನ ಸಂಘಟನೆ ವತಿಯಿಂದ 59ನೇ ಸಂಸ್ಥಾಪನ ದಿನ ಅಂಗವಾಗಿ ಸಸಿ ನೆಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಪಂಡಿತರಾಧ್ಯ ಕೆ.ಹೆಚ್.ಎಂ. ಮತ್ತುತರಬೇತಿ ಅಧಿಕಾರಿಗಳಾದ ರಿಜ್ವಾನ್‍ಖಾನ್ ಸರ್‍ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎ ಐ ಡಿ ವೈ ಓ ರಾಜ್ಯಅಧ್ಯಕ್ಷರಾದ ಶರಣಪ್ಪ ಉದ್ಬಾಳ್ ಅವರುಕೂಡ ಸಸಿ ನೆಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು.
ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶರಣಪ್ಪ ಉದ್ಭಾಳ್ – ‘ ಇಂದಿನ ದಿನಮಾನಗಳಲ್ಲಿ ಸಾಮಾಜಿಕಜವಾಬ್ದಾರಿ, ನೀತಿ- ನೈತಿಕತೆ ಗಳಂತಹ ಮೌಲ್ಯಗಳು ಕುಸಿದುಹೋಗುತ್ತಿವೆ. ಸಮಾಜದಲ್ಲಿ ಮುಖ್ಯವಾಗಿ ವಿದ್ಯಾರ್ಥಿಯುವಜನರಲ್ಲಿಜೀವನವನ್ನುಎದುರಿಸುವಂತಹಧೈರ್ಯಕಾಣೆಯಾಗುತ್ತಿದೆ. ಸಣ್ಣಪುಟ್ಟ ವಿಷಯಗಳಿಗೂ ಕೊಲೆ ಸುಲಿಗೆಗಳಂತಹ ಘಟನೆಗಳು ನಡೆಯುತ್ತಿರುವುದುಆಘಾತಕಾರಿಯಾಗಿದೆ. ಇಂಥ ಸಂದರ್ಭದಲ್ಲಿಯುವಕರಲ್ಲಿಉನ್ನತ ಮೌಲ್ಯಗಳನ್ನ ಬಿತ್ತುವ ನಿಟ್ಟಿನಲ್ಲಿ ಎ ಐ ಡಿ ವೈ ಓ ಯುವಜನ ಸಂಘಟನೆಇಡೀದೇಶದಾದ್ಯಂತ ಕೆಲಸ ನಿರ್ವಹಿಸುತ್ತಿದೆ. ಮಹಾನ್ ವ್ಯಕ್ತಿಗಳ ಆದರ್ಶದಜೀವನವನ್ನು ವಿದ್ಯಾರ್ಥಿಯುವಕರ ಮಧ್ಯೆ ಪ್ರಚಾರ ಮಾಡುತ್ತಾ, ಅವುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಯುವಕರು ಮುಂದಾಗಬೇಕು. ಹಾಗೇ ಸಮಾಜದ ಪಿಡುಗುಗಳಾದ ಬೆಲೆ ಏರಿಕೆ ನಿರುದ್ಯೋಗ ಭ್ರμÁ್ಟಚಾರ ಕೋಮು ಗಲಭೆಗಳಂತ ಘಟನೆಗಳ ವಿರುದ್ಧ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಯುವಕರಿಗೆಖಾಯಂಉದ್ಯೋಗವನ್ನು ಖಾತ್ರಿಪಡಿಸಿ ಎಂಬ ಬೇಡಿಕೆಗಳೊಂದಿಗೆ ನಿರಂತರ ಹೋರಾಟಕಟ್ಟುತ್ತಿದೆ. ಜೊತೆಜೊತೆಯಾಗಿ ಸಾಮಾಜಿಕ ಕಳಕಳಿಯುಳ್ಳಂತಹ ಕೆಲಸಗಳಾದ ವೈದ್ಯಕೀಯ ಶಿಬಿರ, ನೇತ್ರದಾನ ಪ್ರತಿಜ್ಞೆ, ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟಗಳು ಹೀಗೆ ಹತ್ತು ಹಲವಾರು ಚಟುವಟಿಕೆಗಳನ್ನು ಇಡೀದೇಶದಾದ್ಯಂತ ಜನಗಳ ಮಧ್ಯೆಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆ. ಇದರ ಭಾಗವಾಗಿ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಸಸಿ ನೆಡುವಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಾಮಾಜಿಕ ಕಳಕಳಿಯುಳ್ಳ ಪ್ರತಿಯೊಬ್ಬರು ಮಾಡಬೇಕಾಗಿರುವಕರ್ತವ್ಯ, ಪ್ರಕೃತಿಯನ್ನು ಉಳಿಸುವುದು ಬೆಳೆಸುವುದು ನಮ್ಮಜವಾಬ್ದಾರಿ’ ಎಂದುಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದಂತ ಸರ್ಕಾರಿಐಟಿಐ ನ ಪ್ರಾಂಶುಪಾಲರಾದ ಪಂಡಿತಾರಾಧ್ಯ ಕೆ.ಹೆಚ್.ಎಂ. ಅವರು ಮಾತನಾಡಿಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ, ಆನ್ಲೈನ್ ಆಟಗಳು ಮತ್ತು ದುಶ್ಚಟಗಳಿಗೆ ಬಲಿಯಾಗಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಬದಲಿಗೆ ವಿದ್ಯಾರ್ಥಿಯುಕರುಅನ್ಯಾಯದ ವಿರುದ್ಧಧ್ವನಿ ಎತ್ತಬೇಕು, ಮಹಾನ್ ವ್ಯಕ್ತಿಗಳ ವಿಚಾರವನ್ನುಆದರ್ಶವಾಗಿತೆಗೆದುಕೊಂಡುಜೀವನ ನಡೆಸಬೇಕುಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು.
ಈ ಸಂದರ್ಭದಲ್ಲಿ ಎ ಐ ಡಿ ವೈ ಓ ಜಿಲ್ಲಾಧ್ಯಕ್ಷರಾದ ಎ.ಪಂಪಾಪತಿ ಕೋಳೂರು, ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಹಾಗೂ ಕಾಲೇಜಿನಉಪನ್ಯಾಸಕರಾದಉ.ಬಿರಾದರ್, ಜಯಣ್ಣ, ಗೋವಿಂದಪ್ಪ, ವೆಂಕಟೇಶ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.