ಜನತಾದರ್ಶನ: ಅಹವಾಲು ಸ್ವೀಕಾರ
ಧಾರವಾಡ,ಜೂ27: ಧಾರವಾಡ ಜಿಲ್ಲಾಡಳಿತವತಿಯಿಂದ ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 5ನೇ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 175 ಅಹವಾಲುಗಳನ್ನು ಸ್ವೀಕರಿಸಲಾಯಿತು. ಎಲ್ಲವನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಅಹವಾಲುಗಳನ್ನು ಪರಿಹರಿಸುವಂತೆ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಇಲಾಖೆ-47, ನಗರಾಭಿವೃದ್ಧಿ ಇಲಾಖೆ-27, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ-30, ಶಿಕ್ಷಣ ಇಲಾಖೆ-16, ಲೋಕೋಪಯೋಗಿ ಇಲಾಖೆ-8, ಸಮಾಜ ಕಲ್ಯಾಣ ಇಲಾಖೆ-6, ಗೃಹ ಇಲಾಖೆ-5, ಕೃಷಿ ಇಲಾಖೆ-4, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-3, ಸಾರಿಗೆ ಇಲಾಖೆ-3, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-3, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ-3, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ-2, ಡಿಪಿಎಆರ್-2, ಉನ್ನತ ಶಿಕ್ಷಣ ಇಲಾಖೆ-2, ವಸತಿ ಇಲಾಖೆ-2, ಕಾರ್ಮಿಕ ಇಲಾಖೆ-3, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ-2, ಎಚ್‍ಡಿಎಮ್‍ಸಿ-1, ಹಣಕಾಸು ಇಲಾಖೆ-1, ಜಲಸಂಪನ್ಮೂಲ ಇಲಾಖೆ-1, ಶಕ್ತಿ ಇಲಾಖೆ-2, ಅರಣ್ಯ ಇಲಾಖೆ-2 ಸೇರಿ ಒಟ್ಟಾರೆಯಾಗಿ 175 ಅಹವಾಲುಗಳು ಸಲ್ಲಿಸಿದ್ದಾರೆ.