ಜಾಗೃತಿ ಕಾರ್ಯಕ್ರಮ
ಧಾರವಾಡ,ಜೂ27: ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ನಿಮಿತ್ತ ಧಾರವಾಡದ ಕೆ.ಇ.ಬೋರ್ಡನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.
ಈ ಜಾಗೃತಿ ಕಾರ್ಯಕ್ರಮವನ್ನು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಿಗಳ ಸಂಸ್ಥೆ (ಡಿಮ್ಹಾನ್ಸ್), ಪೆÇೀಲಿಸ್ ಇಲಾಖೆ, ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಂಸ್ಥೆ ಧಾರವಾಡ ಹಾಗೂ ಕೆ.ಇ.ಬೋರ್ಡನ ಪ್ರಥಮ ದರ್ಜೆ ಕಲಾ ಮತ್ತು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸಸಿಗೆ ನಿರೂಣಿಸುವುದರ ಮೂಲಕ ಡಿಮ್ಹಾನ್ಸ ಸಂಸ್ಥೆಯÀ ನಿರ್ದೇಶಕ ಡಾ.ಅರುಣಕುಮಾರ ಸಿ ರವರು ಹಾಗೂ ವೇದಿಕೆ ಮೆಲೆ ಇದ್ದಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಡಾ.ಅರುಣಕುಮಾರ ಸಿ ರವರು ಮಾದಕ ವಸ್ತುಗಳ ಸೇವನೆಯ ದುಶ್ಚಟಗಳನ್ನು ಸಮಾಜದಿಂದ ಹೊಗಲಾಡಿಸಲು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದರು. ಮಾದಕ ವ್ಯಸನಕ್ಕೆ ಅಂಟಿಕೊಂಡಿರುವ ಮತ್ತು ಸಹಾಯದ ನೀರಿಕ್ಷೆಯಲ್ಲಿರುವ ಜನರಿಗೆ ಸಹಾಯವನ್ನು ಮಾಡಲು ಎಲ್ಲರೂ ಮುಂದಾಗಬೇಕು, ಈ ನಿಟ್ಟಿನಲ್ಲಿ ಮನೋವೈದ್ಯರ ಮಾರ್ಗದರ್ಶನ ಅಗತ್ಯವಿದ್ದಲ್ಲಿ ಪಡೆದುಕೊಳ್ಳಲು ಹಿಂಜರಿಯಬಾರದೆಂದು ಮಾತನಾಡಿದರು.ಮಾದಕ ವಸ್ತಗಳ ಸೇವನೆಯಿಂದದೇಹಕ್ಕೆ ರೋಗಗಳು ಉಂಟಾಗುತ್ತವೆ, ಅತಿಯಾದ ಮಾದಕ ಸೇವನಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಬರುತ್ತವೆಂದು ಮಾತನಾಡಿದರು.
ಮಾದಕ ಪದಾರ್ಥಗಳು ವ್ಯಸನಕ್ಕೆ ಅಂಟಿಕೊಂಡಾಗ ಅದರಿಂದ ಹೊರ ಬರಲು ವ್ಯಸನಿಗಳು ಕಷ್ಟಪಡುತ್ತಾರೆ, ಇಂತಹ ವ್ಯಸನಿಗಳನ್ನು ನಿರ್ಲಕ್ಷಿಸಬಾರದು, ಇವರಿಗೆ ಅಗತ್ಯ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಕೊಡಿಸಲು ಮುಂದಾಗಬೇಕೆಂದು ಮಾತನಾಡಿದರು.ವ್ಯಸಕ್ಕೆಅಂಟಿಕೊಂಡ ವ್ಯಕ್ತಿಗಳು ಮನೋವೈದ್ಯರ ಬಳಿ ಸೂಕ್ತ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಪಡೆದು ಒಳ್ಳೆಯ ಬದುಕನ್ನು ನಡೆಸುತ್ತಿರುವ ಉದಾಹರಣೆಗಳು ಕೂಡ ಸಮಾಜದಲ್ಲಿ ಸಾಕಷ್ಟಿವೆಂದು ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಸಾಧನೆಗಳನ್ನು ಮಾಡಲು ಸಂಕಲ್ಪವನ್ನು ಮಾಡಬೇಕೆಂದುಸಲಹೆ ನೀಡಿದರು.
ಕೆ.ಇ.ಬೋರ್ಡ£ ಕಾಲೇಜಿನ ಪ್ರಾಂಶುಪಾಲರಾದ ಮೋಹನ ಸಿದ್ದಾಂತಿ ರವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಹವ್ಯಾಸ ಮೈಗೂಡಿಸಿಕೊಂಡು ಮನೆಯಲ್ಲಿ ಒಳ್ಳೆಯ ಪರಿಸರ ಕಾಪಾಡಿಕೊಳ್ಳಲು ಮುಂದಾಗಬೇಕೆಂದರು. ಕಾರ್ಯಕ್ರಮದಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಯಾರು ಅತ್ಯುತ್ತಮ ಪ್ರಬಂಧವನ್ನು ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧೀಕೃತ ಕಳ್ಳ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಬರೆದವರಿಗೆ ಒಳ್ಳೆಯ ಬಹುಮಾನವನ್ನು ಕೋಡುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸಿದರು.
ವಿದ್ಯಾರ್ಥಿಗಳು ಬೇರೆಯವರಿಗೂ ಮಾದಕ ವಸ್ತುಗಳ ಕುರಿತು ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕೆಂದು ಮಾತನಾಡಿದರು.
ಡಾ.ಸುಧೀಂದ್ರ ಹುದ್ಧಾರ, ಸಹಾಯಕ ಪ್ರಾಧ್ಯಾಪಕರು, ಟೆಲಿಮಾನಸ ಇವರು ಅಂತರಾಷ್ಟ್ರೀಯ ಬಮಾದಕ ವ್ಯಸನ ಹಾಗೂ ಅನಧೀಕೃತ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಧಾರವಾಡದ ನಗರ ಪೋಲಿಸ್ ಠಾಣೆಯ ಇನ್ಸ್‍ಪೆಕ್ಟರ್ ಆz Àಶ್ರೀ ಎನ್.ಸಿ.ಕಾಡದೇವರ ರವರು ಎಲ್ಲರಿಗೂ ಮಾದಕ ವಸ್ತುಗಳ ಸೇವನೆ ವಿರೋಧಿ ದಿನದ ಕುರಿತು ಪ್ರತಿಜ್ಞಾ ಭೋದನೆಯನ್ನು ಮಾಡಿಸಿದರು. ವಿದ್ಯಾರ್ಥಿಗಳು ಕೆಟ್ಟ ಚಟಕ್ಕೆ ಅಂಟಿಕೊಳ್ಳಬಾರದು, ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡಿ ಒಳ್ಳೆಯ ಸಾಧನೆಗಳಲ್ಲಿ ತೊಡಗಬೇಕು ಅಂದಾಗ ಮಾತ್ರ ಜೀವನ ಸಾಥಕವಾಗುತ್ತದೆಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಧಾರವಾಡದ ಎಸಿಪಿ ಪ್ರಶಾಂತ ಸಿದ್ದನಗೌಡರ್, ಧಾರವಾಡ ಟೌನ್ ಪೆÇೀಲಿಸ್ ಸ್ಟೇಷನ್ ಪೆÇೀಲಿಸ್ ಇನ್ಸ್ ಪೆಕ್ಟರ್‍ಗಳಾದ ಅಶೋಕ ಬಿ.ಎಸ್.ಪಿ, ಶ್ರೀಮತಿ ಸ್ವಾತಿ ಮುರಾರಿ, ಡಿಮ್ಹಾನ್ಸ್ ನ ಮನೋವೈದ್ಯರಾದ ಡಾ.ಮಹೇಶ ಮಹದೇವಯ್ಯ, ಸ್ವಾಮಿ ವಿವೇಕಾನಂದ ಯೂತ್ ಮೂಮವೆಂಟ್ ಸಂಸ್ಥೆ ಧಾರವಾಡದ ಪ್ರಾದೇಶಿಕ ಮುಖ್ಯಸ್ಥರಾದ ಕೆ.ಎಸ್.ಜಯಂತ ಇವರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮನೋವೈದ್ಯಕೀಯ ಸಮಾಜಕಾಯಕರ್ತರಾದ ಅಶೋಕ ಕೋರಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಮ್.ತಿಮ್ಮಾಪೂರ ವಂದಿಸಿದರು.ಡಾ.ಶ್ರೀಧರ ಕುಲಕರ್ಣಿ ದೇಶ ಭಕ್ತಗೀತೆಯೊಂದನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಸಿಬ್ಬಂದಿ ವರ್ಗದವರು ಹಾಗೂ ಪೋಲಿಸ್ ಇಲಾಖೆಯ ಇತರ ಅಧಿಕಾರಿಗಳು, ಡಿಮ್ಹಾನ್ಸ್, ಟೆಲಿಮಾನಸ್ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು.