ನಾಡಿಗೆ ಕೆಂಪೇಗೌಡರ ಕೊಡುಗೆ ಅನನ್ಯ
ಕಲಬುರಗಿ:ಜೂ.27:ದೇಶದ ಹೆಮ್ಮೆಯ ಬೆಂಗಳೂರಿನ ನಿರ್ಮಾತೃಕೆಂಪೇಗೌಡಅವರುನೂರಾರು ವರ್ಷಗಳ ಹಿಂದೆಯೇಉತ್ತಮ ರಸ್ತೆಗಳ ನಿರ್ಮಾಣ, ಅನೇಕ ಕೆರೆ-ಬಾವಿಗಳ ನಿರ್ಮಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ನಾಡಿಗೆತಮ್ಮದೇಆದಅನನ್ಯವಾದಕೊಡುಗೆಯನ್ನು ನೀಡಿದ್ದಾರೆಂದುಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿಗುರುವಾರಜರುಗಿದ’ನಾಡಪ್ರಭುಕೆಂಪೇಗೌಡರ515ನೇಜಯಂತಿ’ಯಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದಅವರು, ಇಂದು ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿಗುರುತಿಸಲಾಗುತ್ತದೆಂದರೆ, ಅದಕ್ಕೆ ನೂರಾರು ವರ್ಷಗಳ ಹಿಂದೆಕೆಂಪೇಗೌಡರುಅದರಅಭಿವೃದ್ಧಿಗೆನೀಡಿದಶ್ರಮಆಧಾರವಾಗಿದೆಎಂದರು.
ಕಾರ್ಯಕ್ರಮದಲ್ಲಿಉಪನ್ಯಾಸಕರಾದಆಸ್ಮಾಜಬೀನ್, ನಯಿಮಾ ನಾಹಿದ್, ಶರಣಮ್ಮ ಭಾವಿಕಟ್ಟಿ, ಮಲ್ಲಿಕಾರ್ಜುನದೊಡ್ಡಮನಿ, ಮಲ್ಲ್‍ಪ್ಪರಂಜಣಗಿ, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾಚಿಕ್ಕಮೇಟಿ, ಮಲ್ಲಿಕಾರ್ಜುನಆನಂದಕರ್, ಶಿಕ್ಷಕ ಬಸವರಾಜ ಹಡಪದ, ಅತಿಥಿಉಪನ್ಯಾಸಕರು, ವಿದ್ಯಾರ್ಥಿಗಳು ಇದರು.
