ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತ
ಶಿರಹಟ್ಟಿ,ಜೂ27: ಕರ್ನಾಟಕ ಸಂಭ್ರಮ -50 ರ ಪ್ರಯುಕ್ತ ಕನ್ನಡ ಜ್ಯೋತಿ ರಥ ಯಾತ್ರೆಯು ಶಿರಹಟ್ಟಿ ಪಟ್ಟಣಕ್ಕೆ ಆಗಮಿಸಿದಾಗ ರಥಕ್ಕೆ ಡೊಳ್ಳು ಮತ್ತು ಜಾಂಜ ಮೇಳ ಹಾಗೂ ಶಾಲಾ ವಿದ್ಯಾರ್ಥಿಗಳೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ ಭವ್ಯ ಮೆರವಣಗೆಯನ್ನು ಜರುಗಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಅನೀಲ ಬಡಿಗೇರ, ತಾಲೂಕ ಮಟ್ಟದ ಅಧಿಕಾರಿಗಳು ಎಮ್.ಕೆ.ಲಮಾಣಿ, ಹೆಚ್,.ಎಮ್.ದೇವಗೇರಿ. ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕಾಧ್ಯಕ್ಷ ಹೆಚ್.ಎಮ್.ದೇವಗೇರಿ, ಕೆ.ಎ.ಬಳಿಗೇರ, ಶಿಕ್ಷಕ ವೀರಣ್ಣ ಪೋಲೀಸ್‍ಪಾಟೀಲ್, ಪಪಂ ಮುಖ್ಯಾದಿಕಾರಿ, ಸಿದ್ದರಾಯ, ಸಮಾಜ ಕಲ್ಯಾಧಿಕಾರಿ ಎಸ್.ಬಿ.ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಕ್ಷ್ಮೇಶ್ವರ ಪಟ್ಟಣಕ್ಕೆ ತೆರಳಿತು.