ಶಾಸಕರಿಂದ ಆಸ್ಪತ್ರೆ ಪರಿಶೀಲನೆ
ಬಾದಾಮಿ,ಜೂ27: ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಭೇಟಿ ನೀಡಿ ಸಾರ್ವಜನಿಕ ರೋಗಿಗಳಿಗೆ ಅಗತ್ಯ ಸೌಲಭ್ಯ ಬೇಕು ಕುರಿತು ಪರಿಶೀಲಿಸಿದರು.
ಬಾದಾಮಿ ಆಸ್ಪತ್ರೆಯ ಸಭಾಂಗಣದಲ್ಲಿ ಶಾಸಕರು ಭೇಟಿ ನೀಡಿ ಇಲಾಖಾ ಸಿಬ್ಬಂದಿ ಸಭೆ ಮಾಡುವ ಮೂಲಕ ನಾವೆಲ್ಲ ಮಾನವೀಯ ಮೌಲ್ಯಗಳು ಮತ್ತು ಮನುಷ್ಯತ್ವದಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ ಡಾ. ಉಡಚಿಂಚಿ, ತಹಸೀಲ್ದಾರ್ ಜೆ.ಬಿ.ಮಜ್ಜಗಿ, ಟಿಎಚ್‍ಒ ಡಾ. ಎಂ.ಬಿ.ಪಾಟೀಲ, ಸಿಎಂಒ ಡಾ. ರೇವಣಸಿದ್ದಪ್ಪ, ಡಾ. ಕಿರಣ ಕುಳಗೇರಿ, ಡಾ. ಎಸ್.ಎಸ್.ಶೆಟ್ಟರ ಉಪಸ್ಥಿತರಿದ್ದರು.