ವಿಟಿಯು ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಮೈಸೂರು ಪ್ರಾದೇಶಿಕ ಕೇಂದ್ರದ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 25ನೇ ರಾಜ್ಯಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವನ್ನು ಅಂತರಾಷ್ಟ್ರೀಯ ಮಾಜಿ ಅಥ್ಲೀಟ್ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಅಶ್ವಿನಿ ನಾಚಪ್ಪ ಚಾಲನೆ ನೀಡಿದರು.
ತೆರೆದ ವಾಹನದಲ್ಲಿ ಅಶ್ವಿನಿ ನಾಚಪ್ಪ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಅವರನ್ನು ವಿದ್ಯಾರ್ಥಿಗಳು ಬ್ಯಾಂಡ್ ಸಟ್ ಮತ್ತು ಪಥ ಸಂಚಲನದ ಮೂಲಕ ಚಾಮುಂಡಿ ವಿಹಾರ್ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಂತರ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಕೂಟದ ಬಾವುಟ ಹಾರಿಸಿ, ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ನಾಲ್ಕು ದಿನಗಳ ಕ್ರೀಡಾಕೂಟ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, 128 ಕಾಲೇಜುಗಳಿಂದ ವಿದ್ಯಾರ್ಥಿಗಳು ಇಂದು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ಮತ್ತೊಂದೆಡೆ ವಿಟಿಯು ಈ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಒಂದು ದಾಖಲೆಯಾಗಿದೆ. ಭಾರತದಲ್ಲಿ ಈಗ ಕ್ರೀಡೆಗಳ ಕ್ರಾಂತಿಯಾಗುತ್ತಿದ್ದು, ಖೇಲೋ ಇಂಡಿಯಾದಂತಹ ಕೂಟಗಳಿಂದ ಉತ್ತಮ ಪ್ರತಿಬೆಗಳು ಹೊರಹೊಮ್ಮುವೆ ಎಂದರು.
ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಭಾಗಗಳ ತಾಂತ್ರಿಕ ವಿದ್ಯಾಲಯಗಳಿಂದ ಸುಮಾರು 1500 ರಿಂದ 2000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, 23 ವಿವಿಧ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಸ್ಪರ್ಧಿಸಲಿದ್ದಾರೆ. ಮೊದಲನೆ ಬಾರಿಗೆ ಈ ಕ್ರೀಡಾ ಕೂಟದಲ್ಲಿ ಸ್ಪರ್ಧೆಗಳ ಫಲಿತಾಂಶಗಳನ್ನು ಪೆÇೀಟೋ ಫಿನಿಶ್ ತಂತ್ರಜ್ಞಾನ ಬಳಸಿ ನಿಖರವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಸರಿ ಸುಮಾರು 200 ಕ್ರೀಡಾಧಿಕಾರಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳ ವಿಜೇತರಿಗೆ ಕ್ರಮವಾಗಿ 25, 20 ಮತ್ತು 15 ಗ್ರಾಂ ತೂಕದ ಶುದ್ಧ ಬೆಳ್ಳಿ ಪದಕಗಳನ್ನು ನೀಡಲಿದ್ದಾರೆ.
ಕ್ರೀಡಾಕೂಟದಲ್ಲಿ ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ.ಟಿ.ಪಿ.ರೇಣುಕಾ ಮೂರ್ತಿ ವಿಟಿಯು ಆಯೋಜನ ಕಾರ್ಯದರ್ಶಿ ಪ್ರಸನ್ನ ಕುಮಾರ್, ರಘುನಾಥ್, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ವಿ.ಕಡಗಡ್ಕಾಯಿ, ಪರೀಕ್ಷಾ ಕುಲ ಸಚಿವ ಪೆÇ್ರ.ಟಿ.ಎನ್.ಶ್ರೀನಿವಾಸನ್, ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ಡಾ.ಕೃಷ್ಣೇಗೌಡ, ಡಾ.ರಾಕೇಶ್, ಡಾ.ಗೋವಿಂದೇಗೌಡ, ಡಾ.ಎಂ.ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.