ನೈತಿಕ ಸಂದಿಗ್ಧತೆಗಳ ಬಗ್ಗೆ ಜಾಗರೂಕತೆ ವಹಿಸಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ಇಂದಿನ ಡಿಜಿಟಲ್ ಯುಗದಲ್ಲಿ ಸಂಶೋಧಕರು, ಪ್ರಕಾಶಕರು ಮತ್ತು ನಾವುಗಳು ನೈತಿಕ ಸಂದಿಗ್ಧತೆಗಳ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಶೋಧÀನೆ ಮತ್ತು ಪ್ರಕಟಣಾ ನೀತಿಶಾಸ್ತ್ರ ಕುರಿತು ಆರು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ತಂತ್ರಜ್ಞಾನ ಕ್ರಾಂತಿಕಾರಿಯಾಗಿದ್ದು, ಸಂಶೋಧÀನಾ ಕಲಿಕೆ ಮತ್ತು ನೈತಿಕ ಮಾನದಂಡಗಳನ್ನು ನಿರ್ವಹಿಸುವಲ್ಲಿ ಅವಕಾಶಗಳ ಜೊತೆಯಲ್ಲಿ ಸವಾಲುಗಳನ್ನು ಎದುರಿಸಲು ವೇದಿಕೆ ಒದಗಿಸುತ್ತಿದೆ. ಆನ್‍ಲೈನ್ ವೇದಿಕೆಗಳ ಮೂಲಕ ಹೆಚ್ಚಿನ ಪ್ರಮಾಣದ ಡೇಟಾದ ಪ್ರವೇಶ ಮತ್ತು ಪ್ರಸರಣದ ವೇಗ ಸಂವಹನ ಮರುರೂಪಿಸಿದೆ. ಆದರೂ, ಈ ಡಿಜಿಟಲ್ ಯುಗ ಡೇಟಾ ಗೌಪ್ಯತೆ, ಸೈಬರ್ ಭÀದ್ರತೆ ಮತ್ತು ಆನ್‍ಲೈನ್ ವಿಷಯದ ದೃಢೀಕರಣದ ಬಗ್ಗೆ ಕಳವಳ ಉಂಟುಮಾಡುತ್ತದೆ. ನಮ್ಮ ಡಿಜಿಟಲ್ ಸಂವಹನಗಳು ಸಾಂಪ್ರದಾಯಿಕ ಶೈP್ಷÀಣಿಕ ಪ್ರವಚನದಂತೆ ಇರುತ್ತದೆ. ಆದರೆ, ಮಾಹಿತಿಯನ್ನು ಖಚಿತಪಡಿಸಿಕೊಂಡು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಸಂಶೋಧÀನೆ ಮತ್ತು ಪ್ರಕಟಣೆಯ ನೀತಿಶಾಸ್ತ್ರ ಶೈP್ಷÀಣಿಕ ಸಮಗ್ರತೆ ಮತ್ತು ಪಾಂಡಿತ್ಯಪೂರ್ಣ ಅನ್ವೇಷಣೆಯ ತಳಹದಿಯಾಗಿದೆ. ಜ್ಞಾನದ ಹುಡುಕಾಟದಲ್ಲಿ, ನಾವು ಕಂಡುಕೊಳ್ಳುವುದು ಅಥವಾ ಆವಿಷ್ಕರಿಸುವುದು ಮುಖ್ಯವಲ್ಲ. ಆದರೆ, ನಾವು ಸಂಶೋಧÀಕರು, ವಿದ್ವಾಂಸರು ಮತ್ತು ಶಿP್ಷÀಣ ತಜ್ಞರಾಗಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ಅಷ್ಟೇ ಮುಖ್ಯವಾಗಿದೆ. ಸಂಶೋಧÀನೆಯಲ್ಲಿನ ನೈತಿಕ ನಡವಳಿಕೆ ಸಂಶೋಧÀನೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ ಎಂದರು.
ಕೃತಿಚೌರ್ಯ, ಡೇಟಾ ಸಂಗ್ರಹ ತಪ್ಪು ಮಾಹಿತಿ, ಆಸಕ್ತಿಯ ಸಂಘರ್ಷಗಳು ಮತ್ತು ಉದಯೋನ್ಮುಖ ಅಧÀ್ಯಯನ ಕ್ಷೇತ್ರಗಳಲ್ಲಿ ನೈತಿಕ ಇಕ್ಕಟ್ಟುಗಳಂತಹ ಸವಾಲುಗಳನ್ನು ಎದುರಿಸುತ್ತೇವೆ. ಈ ಸವಾಲುಗಳನ್ನು ಪರಿಹರಿಸಲು, ಅರಿವು ಮಾತ್ರವಲ್ಲದೆ ಬದ್ಧತೆಯ ಅಗತ್ಯವಿರುತ್ತದೆ ಎಂದು ತಿಳಿಸಿದರು.
ವಿದ್ವಾಂಸರು ಮತ್ತು ಶಿP್ಷÀಣ ತಜ್ಞರಾಗಿ ಕೇವಲ ಜ್ಞಾನ ಹೆಚ್ಚಿಸುವ ಜವಾಬ್ದಾರಿ ಹೊಂದಿz್ದÉೀವೆ. ಆದರೆ, ನಮ್ಮ ಕೊಡುಗೆಗಳು ನೈತಿಕ, ಪಾರದರ್ಶಕವಾಗಿ ಸಮಾಜಕ್ಕೆ ಪ್ರಯೋಜನಕಾರಿ ಆಗುವಂತೆ ಕೆಲಸ ಮಾಡಬೇಕು. ಜತೆಗೆ ಸಮಗ್ರತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಪ್ರಯತ್ನಿಸೋಣ ಮತ್ತು ನಮ್ಮ ಅಧÀ್ಯಯನದ ಕ್ಷೇತ್ರಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡೋಣ ಎಂದರು.
ಈ ಕಾರ್ಯಾಗಾರ ಡಿಜಿಟಲ್ ಯುಗದಲ್ಲಿ ನೈತಿಕ ಮಾನದಂಡಗಳನ್ನು ಕಾಪಾಡುವ ಮತ್ತು ಸಂಶೋಧÀನೆ ಮತ್ತು ಪ್ರಕಟಣೆಯ ಅಭ್ಯಾಸಗಳಲ್ಲಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಉತ್ತೇಜಿಸುವ, ಕಾರ್ಯತಂತ್ರಗಳನ್ನು ಅನ್ವೇಷಿಸಲು ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾಮುವಿ ಕುಲಸಚಿವ ಪೆÇ್ರ.ಕೆ.ಬಿ.ಪ್ರವೀಣ, ಡೀನ್ ಪೆÇ್ರ.ಎನ್.ಲಕ್ಷ್ಮೀ, ಪಿಎಚ್‍ಡಿ ಘಟಕದ ವಿಶೇಷಾಧಿಕಾರಿ ಡಾ.ಟಿ.ಎಸ್. ಹರ್ಷ, ಆರ್‍ಪಿಇ ಸಂಯೋಜನಾಧಿಕಾರಿ ಡಾ.ವಿ.ಮಹೇಶ್ ಮತ್ತಿತರರು ಇದ್ದರು.