ಬೆಲೆ ಏರಿಸಿ ಸಿದ್ದರಾಮಯ್ಯ ವಚನಭ್ರಷ್ಟರಾಗಿದ್ದಾರೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.27:- ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಚನಭ್ರಷ್ಟರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಭÀವನದಲ್ಲಿ ಬುಧÀವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಜನರಿಗೆ ಯಾವುದೇ ಬೆಲೆ ಹೆಚ್ಚು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ನೀಡಿದ್ದರು. ಆದರೆ ಈಗ ಮಾಡುತ್ತಿರುವುದು ಏನು. ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರ್ರಷ್ಟರಾಗಿದ್ದಾರೆ. ಜತೆಗೆ ಜನರಿಗೆ ಟೋಫಿ ಹಾಕುವೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮನೆಯಲ್ಲಿ ಕಾಫಿ, ಟೀ ಕುಡಿಯಲು ಜಿಎಸ್‍ಟಿ ಕಟ್ಟಬೇಕಾಗಿದೆ. ಮುಖ್ಯಮಂತ್ರಿಗಳು ಕೂಡಲೇ ನಾಡಿನ ಪ್ರಮುಖರ ಸಭೆ ಕರೆಯಬೇಕು. ಹಾಲಿನ ದರ ಹೆಚ್ಚಳ ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಏಕೆ ಇನ್ನೂ ಕೆಡಿಪಿ ಸಭೆ ಕರೆದಿಲ್ಲ, ಇದಕ್ಕೆ ಮುಖ್ಯಮಂತ್ರಿಯೇ ಬರಬೇಕಾಗಿಲ್ಲದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಏಕೆ ಕಾಳಜಿ ತೊರುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದ ಈಗಿನ ವಿದ್ಯಮಾನ, ಪೆಟ್ರೋಲ್, ಹಾಲು ಬೆಲೆಯೇರಿಕೆಯಿಂದ ಆಗಿರುವ ಸಂಕಷ್ಟದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆಯಬೇಕು ಎಂದು ಹೇಳಿದರು.
ಬಿಜೆಪಿ ವಾಸ್ತವ ಅರಿಯಲಿ:
ತುರ್ತು ಪರಿಸ್ಥಿತಿ ಜಾರಿಯಾದ 49ನೇ ವರ್ಷದ ದಿನವನ್ನು ವಿರೋಧÀ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕರಾಳ ದಿನ ಆಚರಿಸಿದೆ. ಆದರೆ, ನಿಜಕ್ಕೂ ಅದು ರಾಜ್ಯದ ಪಾಲಿಗೆ ಕರುಣಾಳು ದಿನವಾಗಿತ್ತು. ಹೀಗಾಗಿ ಬಿಜೆಪಿಯವರು ವಾಸ್ತವ ಅರಿಯಲಿ ಎಂದರು.
ತುರ್ತು ಪರಿಸ್ಥಿತಿ ಜಾರಿಯಾಗಿ 49 ವರ್ಷ ಕಳೆದಿದೆ ಎಂದು ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ಏನು ಸಾಧÀನೆ ಮಾಡುತ್ತಿದ್ದಾರೆ. ಹಳೆಯ ವಿಚಾರಗಳನ್ನು ಇನ್ನೆಷ್ಟು ದಿನ ಮಾತನಾಡುತ್ತೀರಾ? ಪ್ರತಿಭÀಟನೆಯಿಂದ ಲಾಭÀವಾದರೂ ಏನು? ಎಂದು ಪ್ರಶ್ನಿಸಿದರು.
ತುರ್ತು ಪರಿಸ್ಥಿತಿಯಿಂದ ಬಡವರಿಗೆ ಒಳ್ಳೆಯದಾಗಿದೆ. ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಂದು ಉಣ್ಣುವ ತಟ್ಟೆಯನ್ನು, ಹೆತ್ತ ಮಕ್ಕಳನ್ನು ಅಡವಿಟ್ಟು ಬದುಕುತ್ತಿದ್ದವರು. ಇಂದು ಅಂತಹ ಪರಿಸ್ಥಿತಿ ಇಲ್ಲ. ತುರ್ತು ಪರಿಸ್ಥಿಯನ್ನು ದೇವರಾಜು ಅರಸು ಅವರು ಅಭಿವೃದ್ಧಿಗೆ ಬಳಸಿಕೊಂಡರು. ತುರ್ತು ಪರಿಸ್ಥಿತಿ ಬಡವರ ಪರ ಇದ್ದ ಅಲೆ ಎಂದು ಹೇಳಿದರು.
ತುರ್ತು ಪರಿಸ್ಥಿಯನ್ನು ಟೀಕೆ ಮಾಡುತ್ತಿz್ದÉೀವೆ ಹೊರತು ಅದರಿಂದ ಉಂಟಾದ ಲಾಭÀವನ್ನು ಯಾರು ವಿಶ್ಲೇಷಣೆ ಮಾಡಲಿಲ್ಲ. ಬಿಜೆಪಿ ಮಾಜಿ ಶಾಸಕ ರಾಜೀವ್ ಬೆಳಗಾವಿಯಿಂದ ಮೈಸೂರಿಗೆ ಬಂದು ಪ್ರತಿಭÀಟನೆ ಮಾಡುತ್ತಿದ್ದಾರೆ. ಆತ ಒಬ್ಬ ದಲಿತ, ತುರ್ತು ಪರಿಸ್ಥಿತಿಯಿಂದ ಆ ಸಮುದಾಯಕ್ಕೆ ಲಾಭÀವಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಶೋಕ್ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಬದಲು, ಒಂದೇ ಮನೆಯವರು ಏಕೆ ಜೈಲಿನಲ್ಲಿದ್ದಾರೆ, ಪೆÇೀಕ್ಸೊ ಕಾಯ್ದೆ ಅಡಿ ಸ್ವಾಮೀಜಿಗಳು ಜೈಲಿಗೆ ಏಕೆ ಹೋಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರಿನ ಮೇಲೆ ಚಪ್ಪಲಿ ತೂರಲು ಕಾರಣ ಏನು, ಸಂಸದೆ ಕಂಗನಾಗೆ ಓರ್ವ ಮಹಿಳಾ ಪೆÇಲೀಸ್ ಪೇದೆ ಏಕೆ ಕೆನ್ನೆಗೆ ಹೊಡೆದರು, ಒಂದೇ ಮಳೆಗೆ ರಾಮಮಂದಿರ ಏಕೆ ಸೋರುತ್ತಿದೆ, ಇದಕ್ಕೆ ಕಾಂಗ್ರೆಸ್ ಕಾರಣವೇ ಎಂಬ ವರ್ತಮಾನದ ಸಂಕಷ್ಟದ ಬಗ್ಗೆ ಚಿಂತಿಸಲಿ ಎಂದು ತಾಕೀತು ಮಾಡಿದರು.