ಆಯ ತಪ್ಪಿದ ಬಸ್ ರಾಡ್ ಗ್ರೀಲ್ಸ್‌ಗೆ ಡಿಕ್ಕಿ
ಕೋಲಾರ,ಜೂ,೨೭-ನಗರದ ಟಮಕ ರಸ್ತೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹರಟಿ ಗ್ರಾಮಕ್ಕೆ ಸಂಚಾರಿಸುವ ವೇಳೆಯಲ್ಲಿ ಬಸ್‌ನ ರಾಡ್ ಮುರಿದ ಹಿನ್ನೆಲೆಯಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಮುಂದೆ ಆಗುವ ದೊಡ್ಡ ಅನಾಹುತ ಒಂದು ತಪ್ಪಿದ ಘಟನೆ ನಡೆದಿದೆ.
ಕೋಲಾರ ಟಮಕ ರಸ್ತೆಯಲ್ಲಿ ಸಾವಿರರೂ ವಾಹನಗಳು ಸಂಚಾರಿಸುತ್ತವೆ, ಈ ನಿಟ್ಟಿನಲ್ಲಿ ಸಾರಿಗೆ ಬಸ್‌ನ ರಾಡ್ ಕಟ್ ಆಗಿ ರಸ್ತೆಯಲ್ಲಿ ನಿಂತುಕೊಂಡಿದ್ದಾರೆ, ದೊಡ್ಡ ಘಟನೆಯೇ ನಡೆದು ಹೋಗಬೇಕಿತ್ತು,
ಅದೃಷ್ಟವಷತ್ ಚಾಲಕನ ಸಮಯ ಪ್ರಜ್ಞೆಯಿಂದ, ಕೋಲಾರಮ್ಮ ಕೆರೆ ಕಟ್ಟೆಗೆ ಹಾಕಲಾಗಿದ್ದ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿಯ ರಭಸದಿಂದ ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಅದೃಷ್ಟವಷತ್ ಯಾವುದೇ ಪ್ರಾಣಹಾನಿಯಂತಹ ಘಟನೆ ಜರುಗಿಲ್ಲ, ಕಾರಣ ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ ಪಾತ್ರರಾದರು.