ಕೃಪಾ ಸಮಾಜ ಸೇವಾ ಸಂಸ್ಥೆಗೆ 14 ವರ್ಷದ ಸಂಭ್ರಮ ಸಾಧಕರಿಗೆ “ಸೇವಾ ರತ್ನ” ಸನ್ಮಾನ
ಅಥಣಿ :ಸೆ.26: ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರಿಗೆ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ 14 ನೇ ವರ್ಷಾಚರಣೆ ಹಾಗೂ ಶ್ರೀಮತಿ ಕಮಲಾ ರಜನಿಕಾಂತ ಹಿರೇಮನಿ ಇವರ ಮೊದಲ ಪುಣ್ಯಸ್ಮರಣೆ ನಿಮಿತ್ಯ ಬರುವ ಅಕ್ಟೋಬರ್ 5 ರಂದು ” ಸೇವಾ ರತ್ನ” ಪ್ರಶಸ್ತಿಗಳನ್ನು ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಸಂಸ್ಥಾಪಕ ನಿಜಪ್ಪ ಹಿರೇಮನಿ ಅವರು ಹೇಳಿದರು
ಪಟ್ಟಣದ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕರಾದ ನಿಜಪ್ಪ ಹಿರೇಮನಿ ಅವರು ವಿವಿಧ ರಂಗಗಳಲ್ಲಿ ತಮ್ಮದೇ ಅದ ವಿಶಿಷ್ಟ ಸೇವೆಯ ಮೂಲಕ ದೇಶ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ವೈಧ್ಯಕೀಯ ಸೇವಾ ರತ್ನ, ಸೈನಿಕ ಸೇವಾ ರತ್ನ, ಶಿಕ್ಷಕ ಸೇವಾ ರತ್ನ, ಸಮಾಜ ಸೇವಾ ರತ್ನ, ವಿಕಲಚೇತನ ಕ್ರೀಡಾ ರತ್ನ ಪ್ರಶಸ್ತಿಗಳನ್ನು ನೀಡಲು ಸಂಸ್ಥೆಯ ಅಧ್ಯಕ್ಷೆ ಸಂಗೀತಾ ಹಿರೇಮನಿ ಅವರು ನಿರ್ಧರಿಸಿದ್ದಾರೆ. ಇದರ ಜೊತೆಗೆ ದೇವದಾಸಿಯರಿಗೆ ಹಾಗೂ ಮಂಗಳಮುಖಿಯರಿಗೆ ವಿಶೇಷವಾದ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು. ರಾಜಕೀಯ ಧುರೀಣರು ಉಪಸ್ಥಿತರಿರುವರು ಎಂದು ಹೇಳಿದರು