ಎಂಜಿನಿಯರಗಳ ಕೊಡುಗೆ ಅನನ್ಯ
ಬೀದರ್: ಸೆ.26:ದೇಶದ ಅಭಿವೃದ್ಧಿಗೆ ಎಂಜಿನಿಯರಗಳ ಕೊಡುಗೆ ಅನನ್ಯ ಎಂದು ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಬಿ. ಪಾಟೀಲ ನುಡಿದರು.
ರೋಟರಿ ಕ್ಲಬ್ ಬೀದರ್ ವತಿಯಿಂದ ನಗರದ ಐ.ಎಂ.ಎ. ಹಾಲನಲ್ಲಿ ಬುಧವಾರ ಆಯೋಜಿಸಿದ್ದ ಎಂಜಿನಿಯರಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರ ಜೀವನ ಮಟ್ಟ ಸುಧಾರಣೆಯಲ್ಲಿ ಎಂಜಿನಿಯರಗಳ ಜ್ಞಾನ ಹಾಗೂ ಕೌಶಲದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಎಂಜಿನಿಯರಗಳಾದ ಸುನೀಲಕುಮಾರ ಪ್ರಭಾ, ಹಾವಶೆಟ್ಟಿ ಪಾಟೀಲ, ಶಿವಶಂಕರ ಕಾಮಶೆಟ್ಟಿ, ರವೀಂದ್ರ ಮೂಲಗೆ, ರವಿಕಿರಣ ಪಬ್ಬ, ಮಚ್ಚೇಂದ್ರನಾಥ, ನಾಗಪ್ಪ ಪಾಟೀಲ, ಅಶೋಕ ವಂಗಪಲ್ಲಿ ಅವರನ್ನು ಸನ್ಮಾನಿಸಲಾಯಿತು.
ರೋಟೆರಿಯರಗಳಾದ ದತ್ತಾತ್ರಿ ಪಾಟೀಲ, ಭಗವಂತಪ್ಪ, ಅನಿಲ್ ಮಸೂದಿ, ಅನಿಲಕುಮಾರ ಬಿರಾದಾರ, ಸಂಗಮೇಶ ಗಾದಗಿ, ದಾದಾರಾವ್ ಕೋಳೆಕರ್, ಸುಧಾಕರ ಔರಾದಕರ್, ಅಭಿನಯ ಗಾದಾ, ಡಾ. ವಿನೋದ ಸಾವಳಗಿ ಮತ್ತಿತರರು ಇದ್ದರು.
ಡಾ. ಸುರೇಶ ಪಾಟೀಲ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ವಂದಿಸಿದರು.