ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ
ಬೀದರ:ಸೆ.26: ತಾಲೂಕಿನ ಚಿದ್ರಿ ಗ್ರಾಮದ ಅಂಗನವಾಡಿ ಕೇಂದ್ರ-4 ರಲ್ಲಿ ರಾಷ್ಟ್ರೀಯ ಪೆÇೀಷಣಾ ಮಾಸ ಆಚರಣೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಅವರು ಮಾತನಾಡಿ ಗರ್ಭಿಣಿ, ಬಾಣಂತಿಯರಿಗೆ ಅಪೌಷ್ಠಿಕತೆ ಬಗ್ಗೆ ಮತ್ತು ರಕ್ತ ಹೆಚ್ಚಿಸಲು ಸರಿಯಾಗಿ ಊಟ ಮಾಡಬೇಕು, ಹಣ್ಣು, ತರಕಾರಿ ಸೇವಿಸಬೇಕು, ಮೊಳಕೆ ಒಡೆದ ಕಾಳು ಸೇವಿಸುವುದರಿಂದ ರಕ್ತ ಹೆಚ್ಚಿಸುತ್ತದೆ ಎಂದು ಹೇಳಿದರು.
ಬೀದರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಶಾರದಾ ಕಲಮಲಕರ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀಮತಿ ಇಂದುಮತಿ ನಗರಸಭೆ ಸದಸ್ಯರು ವಹಿಸಿದರು, ಸ್ವಾಗತವನ್ನು ಸಾಮುಕಿಬಾಯಿ ಮೇಲ್ವಿಚಾರಕಿಯವರು ಮಾಡಿದರು, ಪ್ರಾರ್ಥನೆ ಗೀತೆ ಸರಸ್ವತಿ ಹಾಡಿದರು, ವಂದನಾರ್ಪಣೆ ಶಕುಂತಲಾ ಸೋನಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾಂತಮ್ಮ, ಶಶಿಕಲಾ, ಗೌರಮ್ಮ, ನಿರ್ಮಲಾ, ಕಸ್ತೂರಿ, ಸುನಂದಾ, ಪೂಜಾ ಎಲ್ಲಾ ಅಂಗನವಾಡಿ ಸಹಾಯಕಿಯರು, ಸಂಕಪ್ಪ ಚಿದ್ರಿ, ಗರ್ಭಿಣಿಯರು ಹಾಗೂ ಬಾಣಂತಿಯರು ಉಪಸ್ಥಿತರಿದ್ದರು.