ಸಂಗಮೇಶ್ವರ ಜ್ಯಾಂತೆ ಗೆ ರಾಜ್ಯಮಟ್ಟದ ಯುವ ರತ್ನ ಪ್ರಶಸ್ತಿ
ಬೀದರ: ಸೆ.26:ಭಾಲ್ಕಿ ತಾಲೂಕಿನ ಜೈನಾಪುರ ಗ್ರಾಮದ ಯುವ ಮುಖಂಡ ಸಂಗಮೇಶ್ವರ ಜ್ಯಾಂತೆ ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಸೂರ್ಯ ಫೌಂಡೇಶನ ವತಿಯಿಂದ ಕೊಡ ಮಾಡುವ 2024ನೇ ಸಾಲಿನ ರಾಜಮಟ್ಟದ ಯುವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಜ್ಯಾಂತೆ ಅವರು ಕನ್ನಡ ಪರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಪ್ರಶಸ್ತಿ ಸಮ್ಮಾನಗಳಿಗೆ ಭಾಜನರಾದ ಇವರು ರಾಜ್ಯಮಟ್ಟದ ಯುವರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಡಾ.ಬಸವರಾಜ ಬಲ್ಲೂರ, ಶಿವಕುಮಾರ್ ಕಟ್ಟೆ, ಟಿ.ಎಂ.ಮಚ್ಚೆ , ಶಿವಶಂಕರ ಟೊಕರೆ, ಎಂ.ಎಸ್.ಮನೋಹರ,ಸಿದ್ಧಾರೆಡ್ಡಿ ನಾಗೋರಾ,ನಾಗೇಶ ಸ್ವಾಮಿ, ಶಿವಕುಮಾರ್ ಪಾಟೀಲ್, ಸಿದ್ಧಾರೂಢ ಭಾಲ್ಕೆ, ಡಾ.ಶಾಲಿವಾನ ಉದಗಿರೆ, ನಾಗರಾಜ ಹಾವಣ್ಣ, ನಾಗಭೂಷಣ ಮಾಮಡಿ ,ಪಾರ್ವತಿ ಸೊನಾರೆ, ಭಾರತಿ ವಸ್ತ್ರದ, ಡಾ.ಶ್ರೇಯಾ ಮಹಿಂದ್ರಕರ್, ಜಯದೇವಿ ಯದ್ಲಾಪೂರೆ, ಡಾ.ಜಗದೇವಿ ತಿಬಶೆಟ್ಟಿ, ಸಂತಸ ವ್ಯಕ್ತಪಡಿಸಿದ್ದಾರೆ.
