ಕೆ.ಎಸ್.ಎಸ್.ಡಿ. ತಾಲೂಕು ಪದಾಧಿಕಾರಿಗಳ ಆಯ್ಕೆ
ಕೋಲಾರ,ಜೂ.೨೭- ಕರ್ನಾಟಕ ಸಮತಾ ಸೈನಿಕ ದಳದ ಕೆ.ಎಸ್.ಎಸ್.ಡಿ ಜಿಲ್ಲಾಧ್ಯಕ್ಷ ಆರ್. ವೇಣು ಹಾರೋಹಳ್ಳಿ ರವರ ಅಧ್ಯಕ್ಷತೆಯಲ್ಲಿ ಮಾಲೂರು ತಾಲೂಕು ಪದಾಧಿಕಾರಿಗಳನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇಮಕ ಮಾಡಲಾಯಿತು.
ಮಾಲೂರು ತಾಲೂಕು ಅಧ್ಯಕ್ಷರಾಗಿ ದೊರೆಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಂ.ನಾಗೇಶ್, ಕಾರ್ಯಾಧ್ಯಕ್ಷರಾಗಿ ಭರಥ್ ಎಂ, ಉಪಾಧ್ಯಕ್ಷರಾಗಿ ಎನ್.ವಿ ಸುರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ್, ಗೌರವಾಧ್ಯಕ್ಷರಾಗಿ ಮಂಜುನಾಥ್, ಖಜಾಂಚಿಯಾಗಿ ಚಲಪತಿ ಜಯಮಂಗಲ, ಜಂಟಿ ಕಾರ್ಯದರ್ಶಿಯಾಗಿ ಲೋಕೇಶ್, ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರಾಗಿ ಶ್ರೀನಿವಾಸ್, ಯುವ ಘಟಕ ತಾಲೂಕು ಅಧ್ಯಕ್ಷರಾಗಿ ಶಶಿಕುಮಾರ್ ಎಸ್. ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಆರ್. ವೇಣು ಹಾರೋಹಳ್ಳಿ ಮಾತನಾಡಿ, ಸಂಘಟನೆ ಬಲಪಡಿಸುತ್ತಾ ತಾಲೂಕಿನ ಎಲ್ಲಾ ಹೋಬಳಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿ ಸಂಘಟನೆಗೆ ಯಾವುದೇ ರೀತಿಯ ಕೆಟ್ಟ ಹೆಸರು ಬರದಂತೆ ನಡೆದುಕೊಳ್ಳಬೇಕೆಂದು ಸೂಚಿಸಿದರು.
ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಹನುಮಂತಪ್ಪ. ಜಿಲ್ಲಾ ಕಾರ್ಯದರ್ಶಿ ವೆಂಕಟೇಶಪ್ಪ, ಶ್ರೀನಿವಾಸ್ ಭಾಗವಹಿಸಿದ್ದರು.