ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಇತರರಿಗೆ ಪ್ರೇರಕರಾಗಬೇಕು
ಕೋಲಾರ,ಜೂ,೨೭-ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸುತ್ತಿರುವುದರಿಂದ ಇತರೆ ವಿದ್ಯಾರ್ಥಿಗಳಿಗೆ ಪ್ರೇರಕರು ಎಂದು ಸಮಾಜ ಸೇವಕರಾದ ಸಿ.ಎಂ.ಆರ್.ಶ್ರೀನಾಥ್ .
ನಗರದ ಸ್ಕೌಟ್ ಭವನದಲ್ಲಿ ಆಯೋಜನೆ ಮಾಡಿರುವ ನಾಲ್ಕು ದಿನಗಳ ರಾಜ್ಯ ಪುರಸ್ಕಾರ ಪೂರ್ವ ಸಿದ್ದತಾ ಹಾಗೂ ನಿಪುಣ್ ಪರಿಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲಾ ಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಸಲು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಸಹಕಾರಿಯಾಗಿದ್ದು ತಾವು ಕಲಿತ ಅಂಶಗಳನ್ನು ಜೀವನದಲ್ಲಿ ರೂಡಿಸಿಕೊಂಡು ಇತರೆ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಮಾಡುವಂತ ಜೀವನವನ್ನು ಕಟ್ಟಿಕೊಳ್ಳಬೇಕು , ಸ್ಕೌಟ್ಸ್ ಗೈಡ್ಸ್ ಇಂದಿನ ಆಧುನಿಕ ಜಗತ್ತಿನಲ್ಲಿ ಇರುವ ಅನೇಕ ಸವಾಲುಗಳಿಗೆ ಪರಿಹಾರ ಕ್ರಮಗಳನ್ನು ತಿಳಿಸುವಂತಹ ಶಿಕ್ಷಣ ಹಾಗೂ ಮಾರ್ಗದರ್ಶನ ಶಿಬಿರಗಳ ಮೂಲಕ ಸಿಗಲಿದ್ದು ತಾವು ಉತ್ತಮವಾಗಿ ಅರಿತು ಈ ಸಮಾಜದ ಸುಧಾರಣೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಮಾತನಾಡಿ ಜಿಲ್ಲೆಯಲ್ಲಿ ಸ್ಕೌಟ್ ಗೈಡ್ ಚಳುವಳಿ ಹೆಚ್ಚಲು ಬೇಕಾದ ಸಹಕಾರವನ್ನು ನೀಡಲು ಸದಾ ಸಿದ್ದವಿದ್ದು ಶಾಲಾ ಶಿಕ್ಷಕರು ತಮ್ಮ ತರಬೇತಿ ಜೀವನವನ್ನು ಶಾಲಾ ಕಾಲೇಜು ಮಕ್ಕಳಿಗೆ ಸಿಗುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ತಾವು ಮತ್ತಷ್ಟು ಸೇವಾ ತಂಡಗಳನ್ನು ಹೆಚ್ಚಿಸಿದಾಗ ಮಾತ್ರ ನಾವು ಈ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದು ತಿಳಿಸಿದರು.
ಕೋಲಾರ ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ನವೀನಾ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಶಿಕ್ಷಣದಲ್ಲಿ ಭಾಗಿಯಾದವರು ಅದೃಷ್ಟವಂತರು, ತಾವು ತಮ್ಮ ಭವಿಷ್ಯದಲ್ಲಿ ಎದುರಿಸುವ ಸವಾಲುಗಳಿಗೆ ಪರಿಹಾರ ಕ್ರಮಗಳು ಸಿಗಲಿದ್ದು, ತಾವು ಉತ್ತಮವಾಗಿ ಭಾಗವಹಿಸುವ ಮೂಲಕ ಹಾಗೂ ತಮ್ಮ ಸ್ನೇಹಿತರನ್ನು ಭಾಗವಹಿಸುವಂತೆ ಮಾಡುವ ಮೂಲಕ ಸ್ಕೌಟ್ಸ್ ಗೈಡ್ಸ್ ಚಳುವಳಿಯನ್ನು ಹೆಚ್ಚಿಸಬೇಕು. ಸಂಸ್ಥೆಯ ತತ್ವಗಳು ಮತ್ತು ಸಿದ್ದಾಂತಗಳು ಇಂದಿನ ಆಧುನಿಕ ಜಗತ್ತಿಗೆ ಅತ್ಯಗತ್ಯವಾಗಿದ್ದು ಯುವ ಶಕ್ತಿಯ ಮೂಲಕ ಸಂಸ್ಥೆಯ ಆದರ್ಶಗಳನ್ನು ಸಾಕಾರಗೋಳಿಸಲು ತಾವು ಸೇವೆಗೆ ಸದಾ ಸಿದ್ದರಾಗಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮೃದಿ ಸುಧಾಕರ್, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಪಧಾಧಿಕಾರಿಗಳಾದ ಕೆ.ಆರ್.ಸುರೇಶ್, ಉಮಾದೇವಿ, ವಿಠಲ್ ರಾವ್, ವೆಂಕಟರಂಗಂ, ಸ್ಕೌಟ್ ಬಾಬು, ಕೃಷ್ಣಮೂರ್ತಿ, ಗೌರಾಬಾಯಿ, ವಿನಯ್, ನಿರಂಜನ್, ಹರೀಶ್, ನಾರಾಯಣಸ್ವಾಮಿ, ಹೇಮಾವತಿ, ರಾಮಕೃಷ್ಣೇಗೌಡ, ಕಿಫಾಯತ್, ಮಂಜುಳ, ವಿಸ್ಮಯ ಮುಂತಾದವರು ಉಪಸ್ಥಿತರಿದ್ದರು.