ಖೇಲೋ ಇಂಡಿಯಾ ಮಹಿಳೆಯರ ಸೈಕ್ಲಿಂಗ್ ಚಾಂಪಿಯನ್‍ಶಿಪ್:ಪಾಯಲ್ ಚವ್ಹಾಣಗೆ ಕಂಚಿನ ಪದಕ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.27:ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟು ಪಾಯಲ್ ಚವ್ಹಾಣ ಅವರು ನವದೆಹಲಿಯಲ್ಲಿ ಜರುಗಿದ ಖೇಲೋ ಇಂಡಿಯಾ ಮಹಿಳೆಯರ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜಯಪುರದ ಬಿಎಲ್‍ಡಿಇ ಸಂಸ್ಥೆಯ ಎಸ್.ಬಿ. ಆಟ್ರ್ಸ್ ಮತ್ತು ಕೆಸಿಪಿ ಸಾಯಿನ್ಸ್ ಕಾಲೇಜ ವಿದ್ಯಾರ್ಥಿ ಭೂತನಾಳ ತಾಂಡಾದ ಪಾಯಲ್ ಚವ್ಹಾಣ ಕಂಚಿನ ಪದಕ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ, ಪಾಯಲ್ ಚವ್ಹಾಣ ಸಾಧನೆಗೆ ಸೈಕ್ಲಿಂಗ್ ತರಬೇತಿದಾರರಾದ ಅಲ್ಕಾ ಪಡತಾರೆ ಹಾಗೂ ರಮೇಶ ರಾಠೋಡ ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪಾಯಲ್ ಚವ್ಹಾಣ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಎಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.