ಸಮರ್ಪಕ ಬಿಸಿ ಊಟ ನೀಡದಕ್ಕೆ ಪ್ರತಿಭಟನೆ
ದೇವರಹಿಪ್ಪರಗಿ:ಜೂ.27: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜಯಶ್ರೀ ನಾಯಕ ರವರು ಮಕ್ಕಳಿಗೆ ಬಿಸಿ ಊಟ ಸರಿಯಾಗಿ ನೀಡುತ್ತಿಲ್ಲ, ಹಾಗೂ ಶಾಲೆಗೆ ಸಮಯಕ್ಕೆ ಸರಿಯಾಗಿ ಶಿಕ್ಷಕಿ ಬಾರದೇ ಇರುವುದರಿಂದ, ಇಂತಹ ಶಿಕ್ಷಕಿಯರು ನಮಗೆ ಅವಶ್ಯಕತೆ ಇಲ್ಲ ಕೂಡಲೇ ಇವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಶಾಲಾ ಮಕ್ಕಳು,ಪಾಲಕರು,ಸ್ಥಳೀಯರು ಪ್ರಭಾರಿ ಮುಖ್ಯ ಶಿಕ್ಷಕಿ ಜಯಶ್ರೀ ನಾಯಕ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಶಾಲೆಯ ಮುಂದಗಡೆ ಪ್ರತಿಭಟನೆ ಮಾಡಿದರು.
ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದೆ ಮನಸ್ಸೋ ಇಚ್ಛೆ ಶಾಲೆಗೆ ಬರುವ ಇಂತಹ ಶಿಕ್ಷಕಿ ನಮ್ಮ ಶಾಲೆಗೆ ಈ ಶಿಕ್ಷಕಿ ಜಯಶ್ರೀ ನಾಯಕ ಬೇಡವೇ ಬೇಡ, ಮಕ್ಕಳ ಹಿತ ಕಾಪಾಡದ ಶಿಕ್ಷಕಿ ನಮ್ಮೂರ ಶಾಲೆಗೆ ಬೇಡ ಬೇರೆ ಕಡೆಗೆ ಎಂದು ಮಕ್ಕಳು, ಪಾಲಕರು ಘೋಷಣೆ ಕೂಗಿ ಬೇರೆ ಮುಖ್ಯ ಶಿಕ್ಷಕರನ್ನು ನೇಮಕ ಮಾಡಬೇಕು,ಎಂದು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಭೇಟಿ ನೀಡಿ, ಮಕ್ಕಳು ಹಾಗೂ ಪಾಲಕರ ಮನವೊಲಿಸಲು ಮುಂದಾಗಿದ್ದಾರೆ.
ಶಿಕ್ಷಕಿ ಜಯಶ್ರೀ ನಾಯಕ ರವರಿಗೆ ತರಾಟೆಗೆ ತೆಗೆದುಕೊಂಡರು. ಪಾಲಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಪ್ರಾಬಾರಿ ಮುಖ್ಯ ಶಿಕ್ಷಕಿಯಾದ ಜಯಶ್ರೀ ನಾಯಕ ಸ್ಥಾನವನ್ನು ಎಸ್ ಎಚ್ ಬಿರಕಗಡ್ಡಿ ಯವರಿಗೆ ಪ್ರಭಾರ ಮುಖ್ಯ ಶಿಕ್ಷಕರನ್ನಾಗಿ ನೆಮಿಸಿದರು. ಅದೇ ರೀತಿಯಾಗಿ ಶಿಕ್ಷಕಿಯರಾದ ಜಯಶ್ರೀ ರವರಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಬೇಕು, ಇಲ್ಲವಾದಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು.ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಸೋಮಯ್ಯ ನಂದಿಕೋಲ, ಆನಂದ ಪೂಜಾರಿ, ರಾಮು ಸಿಂದಗಿ, ಅಶೋಕ ಮಣೂರ, ರವಿ ಸಿಂದಗಿ, ಹಣಮಂತ ವಾಲಿಕಾರ, ಅಬ್ಬಾಸಲಿ ಭಾಗವಾನ, ಶಾಂತು ಬಜೆಂತ್ರಿ, ರವಿ ತಳವಾರ, ವಿದ್ಯಾರ್ಥಿಗಳಾದ ರಕ್ಷಿತಾ ಜೋಗೂರ, ಹಣಮಂತ ಹಿರೇಕುರುಬರ, ರೂಪಾ ಬೆನಾಳ, ಚಂದ್ರಿಕಾ ಮರಾಠಿ, ಪೂಜಾ ಕನ್ನೋಳ್ಳಿ, ಸಂಕೇತ ಸಿಂದಗಿ, ಐಶ್ವರ್ಯ ಹಡಪದ, ನಿಂಗರಾಜ ನಾಗಾವಿ, ಇನ್ನು ಅನೇಕ ಮಕ್ಕಳು ಇದ್ದರು.