ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ
ಕಲಬುರಗಿ:ಜೂ.26: ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ “ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ”ದ ೩ನೇ ದಿನದ ಕಾರ್ಯಕ್ರಮವನ್ನು ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಪದವಿ ಪೂರ್ವ ಕಾಲೇಜ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಡಾ. ನೀಲಾಂಬಿಕಾ ಪೋಲಿಸ್‌ ಪಾಟೀಲ್‌ ನಿವೃತ್ತ ಪ್ರಾಂಶುಪಾಲರು ಗೋದುತಾಯಿ ಪದವಿ ಕಾಲೇಜ ಕಲಬುರಗಿ ಅವರು ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಧೈರ್ಯದ ಮಾತಗಳನ್ನು ಹೇಳಿ ಅವರಿಗೆ ಪ್ರೋತ್ಸಾಹಿಸಿದರು. ಕಾರ್ಯಕ್ರಮಕ್ಕೆ ವೀಶೆಷ ಉಪನ್ಯಾಸಕರಾಗಿ ಆಗಮಿಸಿದ ಡಾ. ಜಯಶ್ರೀ ಗಣಜಲಖೇಡ ಹಿರಿಯ ವೈದ್ಯಾಧಿಕಾರಿಗಳು, ಜಿಮ್ಸ್‌ ಆಸ್ಪತ್ರೆ ಕಲಬುರಗಿ ಅವರು ಕ್ಯಾನ್ಸರ್ ರೋಗದ ಅಂದರೆ ಏನು ಅದರ ಲಕ್ಷಣಗಳು, ಅದರ ಬೆಳವಣಿಗೆ ಮತ್ತು ಸ್ತನ ಕ್ಯಾನ್ಸರ್‌, ಗರ್ಭಕಂಠದ ಕ್ಯಾನ್ಸರ್‌ ಲಕ್ಷಣಗಳು ಹಾಗೂ ಅದನ್ನು ಹೇಗೆ ತಡೆಗಟ್ಟವ ಪ್ರಕ್ರಿಯೆಯನ್ನು ಡೇಟಾ ವಿಧಾನಗಳ ಪ್ರದರ್ಶನದ ಮೂಲಕ ಸವಿಸ್ತಾರವಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿ ಹೇಳಿದರು..
ಕಾರ್ಯಕ್ರಮದ ವೇದಿಕೆ ಮೇಲೆ ರೆಡ್‌ ಕ್ರಾಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ರವೀಂದ್ರ ಶಾಬಾದಿ, ಆರೋಗ್ಯ ಸಮಿತಿ ಸಂಚಾಲಕರಾದ ಶ್ರೀ ಪರಮೇಶ್ವರ ಶೆಟಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಂಚಲಕರಾದ ಶ್ರೀಮತಿ ನೈನಾ ಸೇಠಿಯಾ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮಾ ಅಪಚಂದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.