ಮಹಿಳಾ ಆಯೋಗದಿಂದ ಪ್ರಗತಿ ಪರಿಶೀಲನೆ:ಪೋಸ್ಕೋ ಕೇಸ್ ತಡೆಯಲು ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಿ:ಡಾ.ನಾಗಲಕ್ಷ್ಮೀ ಚೌಧರಿ
ಕಲಬುರಗಿ,ಜೂ.26: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಪೆÇೀಸ್ಕೋ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಬೇಕೆಂದು ಪೆÇಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮೀಸಲಾತಿ, ಸರ್ಕಾರಿ-ಖಾಸಗಿ ಸಂಸ್ಥೆಯಲ್ಲಿ ಅಂತರಿಕ ದೂರು ಸಮಿತಿ ರಚನೆ, ಮಹಿಳಾ ದೌರ್ಜನ್ಯ ಪ್ರಕರಣ ಮತ್ತು ಸುರಕ್ಷತೆ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ದೌರ್ಜನ್ಯ ಪ್ರಕರಣ ಕಡಿಮೆಗೊಳಿಸಲು ಅರಿವೇ ಮದ್ದಾಗಿದೆ. ವಿಶೇಷವಾಗಿ ದೌರ್ಜನ್ಯ, ಪೆÇೀಸ್ಕೋ, ಬಾಲ್ಯ ವಿವಾಹ ನಿμÉೀಧ ಹೀಗೆ ವಿವಿಧ ವಿಷಯಗಳ ಕುರಿತು ಶಾಲೆ, ಕಾಲೇಜು ಹಾಗೂ ವಸತಿ ನಿಲಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಪ್ರತಿ 6 ತಿಂಗಳಿಗೊಮ್ಮೆ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಸ್.ಪಿ ಅಕ್ಷಯ್ ಹಾಕೈ ಮಾತನಾಡಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ 40 ಮಹಿಳೆಯರು, 22 ಅಪ್ರಾಪ್ತ ಬಾಲಕೀಯರು ಸೇರಿ ,62 ಜನಮಿಸ್ಸಿಂಗ್ ಪ್ರಕರಣಗಳಾಗಿದ್ದು, ಇದರಲ್ಲಿ ಈಗಾಗಲೆ 21 ಪ್ರಕರಣಗಳನ್ನು ಟ್ರೇಸ್ ಮಾಡಲಾಗಿದೆ. ಅದೇ ರೀತಿ 9 ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 7ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ವಿಶೇಷವಾಗಿ ಹಳ್ಳಿ, ತಾಂಡಾದಲ್ಲಿ ನಡೆಯುವ ಬಾಲ್ಯ ವಿವಾಹ ತಡೆಗಟ್ಟಲು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಗ್ರಾಮಾಂತರದಲ್ಲಿ 16, ನಗರದಲ್ಲಿ 10 ಸೇರಿ 26 ಇ.ಆರ್.ಎಸ್.ಎಸ್.-112 ವಾಹನಗಳಿದ್ದು, ಪ್ರತಿ ದಿನ ಸುಮಾರು 30-40 ಕರೆ ಬರುತ್ತಿದ್ದು, ಇವುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ಇಲಾಖೆಯ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಮಹಿಳಾ ಅಪಹರಣ ಪ್ರಕರಣಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷರು, ಇದಕ್ಕೆ ಕಡಿವಾಣ ಹಾಕಬೇಕೆಂದರು.
ಮಹಿಳೆಯರು ದೂರು ನೀಡಲು ಪೆÇಲೀಸ್ ಠಾಣೆಗೆ ಬಂದರೆ ಪೆÇಲೀಸರಿಂದ ಸ್ಪಂದನೆ ಸಿಗುತ್ತಿಲ್ಲ. ಮಹಿಳಾ ಸ್ನೇಹಿ ಪೆÇಲೀಸ್ ವ್ಯವಸ್ಥೆ ತರಬೇಕು. ಪೆÇಲೀಸ್ ಸಿಬ್ಬಂದಿಗೆ ಲಿಂಗಸಂವೇದನೆ ಅರಿವು ಮೂಡಿಸಿದ್ದೀರಾ ಎಂದು ಎಸ್.ಪಿ. ಅಕ್ಷಯ್ ಹಾಕೈ ಅವರನ್ನು ಡಾ.ನಾಗಲಕ್ಣ್ಮೀ ಚೌಧರಿ ಪ್ರಶ್ನಿಸಿದರು. ಇದಕ್ಕೆ ಎಸ್.ಪಿ. ಅಕ್ಷಯ್ ಹಾಕೈ ಉತ್ತರಿಸಿ ಪ್ರತಿ ಠಾಣೆಯಲ್ಲಿ ಮಹಿಳಾ ಡೆಸ್ಕ್ ಸ್ಥಾಪಿಸಿದೆ. ಮಹಿಳಾ ಸಬಲೀಕರಣ ಕುರಿತು ಸಹ ಅರಿವು ಮೂಡಿಸಲಾಗುತ್ತಿದೆ. ಪೆÇಲೀಸ್ ಭಯ ಹೋಗಲಾಡಿಸಲು ಪ್ರತಿ ಗುರುವಾರ ಪೆÇಲೀಸ್ ಠಾಣೆಯಲ್ಲಿ “ತೆರೆದ ಮನೆ” ಕಾರ್ಯಕ್ರಮ ಆಯೋಜಿಸಿ ಹತ್ತಿರದ ಶಾಲಾ ಮಕ್ಕಳಿಗೆ ಕರೆತಂದು ಠಾಣಾ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ ಇಲಾಖೆಯ ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷೆ ಒದಗಿಸಿದೆ. ಊಟ, ವಸತಿ ಸರಿಯಾಗಿ ಪೂರೈಸಲಾಗುತ್ತಿದೆ. ಪ್ರತಿ ಮಾಹೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ವಸತಿ ಶಾಲೆಯಲ್ಲಿ ಖಾಯಂ ನರ್ಸ್ ಇದ್ದಾರೆ. ಬಾಲಕೀಯರ ವಸತಿ ನಿಲಯಕ್ಕೆ ಪೆÇಲೀಸ್ ಗಸ್ತು ಇದೆ ಎಂದ ಅವರು, ವಿಶೇಷವಾಗಿ ಬಿ.ಸಿ.ಎಂ ಇಲಾಖೆಯ ವಸತಿ ನಿಲಯದಲ್ಲಿ ಸ್ವಯಂ ರಕ್ಷಣೆಗೆ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದರು. ಆಗ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಬಿ.ಸಿ.ಎಂ ಇಲಾಖೆಯಲ್ಲಿ ಮಾತ್ರ ಕರಾಟೆ ತರಬೇತಿ ಇದ್ದು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಹಾಸ್ಟೆಲ್ ನಲ್ಲಿ ಇಲ್ಲ. ಸರ್ಕಾರದ ನೀತಿ ನಿರ್ಧಾರಕ್ಕೆ ಈ ವಿಷಯ ಒಳಪಟ್ಟಿದೆ ಎಂದಾಗ ಅಧ್ಯಕ್ಷರು ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಮಂಗಳವಾರ ಅಫಜಲಪೂರ ತಾಲೂಕಿನ ಗೊಬ್ಬೂರ ಪಿ.ಎಚ್.ಸಿ.ಗೆ ಭೇಟಿ ನೀಡಿದ್ದೆ. ಇದೂವರೆಗೆ ಅಲ್ಲಿ ಆರೋಗ್ಯ ಶಿಬಿರ ನಡೆಸಿಲ್ಲ ಎಂದು ಮಹಿಳೆಯರು ದೂರಿದ್ದರು. ನಾನು ಬರುತ್ತಿದ್ದೇನೆ ಎಂದರೆ ಶಿಬಿರ ಆಯೋಜಿಸಿದ್ದೀರಾ, ಹಿಂದೇಕೆ ಆಯೋಜನೆ ಮಾಡಿಲ್ಲ ಎಂದು ಅರೋಗ್ಯ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ಇನ್ನು ಅಲ್ಲಿದ ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಗೆ ಯಾವುದರ ಬಗ್ಗೆ ಅರಿವು ಇಲ್ಲಎಂದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಮಹಿಳಾ ಜನಪ್ರತಿನಿಧಿ ಪ್ರಕರಣಗಳಲ್ಲಿ ಸರ್ಕಾರಿ ಸಭೆ-ಸಮಾರಂಭಗಳಿಗೆ ಪತಿಗಳನ್ನು ಸಭೆಗೆ ಆಹ್ವಾನಿಸದೆ ಮಹಿಳಾ ಜನಪ್ರತಿನಿಧಿಗಳಿಗೆ ಸರ್ಕಾರಿ ಯೋಜನೆಗಳು ಮತ್ತು ಅವರ ಜವಾಬ್ದಾರಿ ಕುರಿತು ಮಾಹಿತಿ ನೀಡಬೇಕೆಂದು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಿಷನ್ ಸುರಕ್ಷಾ ಕಾರ್ಯಕ್ರಮಕ್ಕೆ ಅಭಿನಂದನೆ: ಸಭೆಯಲ್ಲಿ ಭಾಗವಹಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಕೀಯರ ಸಂರಕ್ಷಣೆ ಮತ್ತು ಅರಿವು ಮುಡಿಸುವ ನಿಟ್ಟಿನಲ್ಲಿ ಮಿಷನ್ ಸುರಕ್ಷಾ ಯೋಜನೆಯಡಿ 450 ಜನರನ್ನು ಮಾಸ್ಟರ್ ಟ್ರೇನರ್ ಗಳನ್ನು ನೇಮಕಗೊಳಿಸಿ ಸುಮಾರು 2,198 ಶಾಲೆ, ಕಾಲೇಜು, ವಸತಿ ನಿಲಯಕ್ಕೆ ಹೋಗಿ 4 ಲಕ್ಷ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದಾಗ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಅರಿವು ಹೆಚ್ಚಾದರೆ ಕ್ರೈಂ ಕಡಿಮೆಯಾಗಿ ಕೆಲಸವು ಕಡಿಮೆಯಾಗುತ್ತದೆ. ಮಿಷನ್ ಸುರಕ್ಷಾ ಅನುಷ್ಠನಾಕ್ಕೆ ಶ್ರಮಿಸಿದ ಜಿಲ್ಲಾಡಳಿತಕ್ಕೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಅಭಿನಂದನೆ ಸಲ್ಲಿಸಿಸಿದರು.
ಮಹಿಳಾ ಲಿಂಗಾನುಪಾತ ಕಡಿಮೆ,ಏನು ಕ್ರಮ ಕೈಗೊಂಡಿದ್ದೀರಿ: ಸಭೆಯ ಚರ್ಚೆ ವೇಳೆಯಲ್ಲಿ ಆಯೋಗದ ಅಧ್ಯಕ್ಷರು ಜಿಲ್ಲೆಯಲ್ಲಿ ಲಿಂಗಾನುಪಾತ ಕೇಳಿದಾಗ ಪ್ರಭಾರಿ ಡಿ.ಎಚ್.ಓ ಡಾ.ಸುರೇಶ ಮೇಕಿನ್ ಉತ್ತರಿಸುತ್ತಾ ಜಿಲ್ಲೆಯಲ್ಲಿ 1,000 ಪುರುಷರಿಗೆ 943 ಮಹಿಳೆಯರಿದ್ದಾರೆ ಎಂದಾಗ ಇಷ್ಟು ಕಡಿಮೆ ಲಿಂಗಾನುಪಾತ? ಇದಕ್ಕೇನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು. ಅವರಿಗೆ ಪ್ರಶ್ನಿಸಿದರು. ಲಿಂಗಾನುಪಾತ ಸರಿಪಡಿಸಲು ಇಲಾಖೆಯಿಂದ ಈ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗುತ್ತಿದೆ ಎಂದು ನವೀನ್ ಯು. ಮಾಹಿತಿ ನೀಡಿದರು. ಆರ್.ಸಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ ಮಾತನಾಡಿ ಮಹಿಳೆಯರಲ್ಲಿನ ರಕ್ತ ಹೀನತೆ ನಿವಾರಣೆ ನಿಟ್ಟಿನಲ್ಲಿ ಅನೆಮಿಯಾ ಮುಕ್ತ ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಪಿ.ಯು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಐರನ್ ಟ್ಯಾಬ್ಲೆಟ್ ವಿತರಿಸಲಾಗುತ್ತಿದೆ. ಲಿಂಗ ಪತ್ತೆ ತಡೆಗೂ ಅಗತ್ಯ ಕ್ರಮ ವಹಿಸಿದೆ ಎಂದರು.
ಕ್ಯಾಂಪಸ್ ಮರ್ಡರ್ ಹಿನ್ನೆಲೆ,ಭದ್ರತೆ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಮರ್ಡರ್ ಪ್ರಕರಣಗಳು ಕಾಣುತ್ತಿವೆ. ಧಾರವಾಡ ನೇಹಾ ಪ್ರಕರಣ ನಮ್ಮ ಮುಂದಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಡಿ.ಸಿ, ಎಸ್.ಪಿ ಅವರು ಪತ್ರ ಬರೆದು ಭದ್ರತೆ ಜವಾಬ್ದಾರಿ ಸಂಸ್ಥೆದು ಎಂದು ಸ್ಪಷ್ಟವಾಗಿ ತಿಳಿಸಬೇಕು. ಹೆಚ್ಚಿನ ಶುಲ್ಕ ಪಡೆಯುವ ಸಂಸ್ಥೆಗಳು ವಿದ್ಯಾರ್ಥಿಗಳ ಸುರಕ್ಷಾ ಜವಾಬ್ದಾರಿ ಹೊರಬಾರದೆ ಎಂದರು.
ಸಭೆಯಲ್ಲಿ ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಎ.ಸಿ.ಪಿ. ಬಿಂದುಮಣಿ ಆರ್.ಎನ್., ಡಿ.ಸಿ.ಪಿ.ಓ ಮಂಗಲಾ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.