ಮಾದಕ ವಸ್ತುಗಳ ಸೇವನೆಯಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ
ಕಲಬುರಗಿ:ಜೂ.26:ಇಂದಿನ ಯುವ ಶಕ್ತಿ ಕಾರಣಾಂತರದಿಂದಮಾದಕ ವಸ್ತುಗಳ ಸೇವನೆಯದುಶ್ಚಟಕ್ಕೆಬಲಿಯಾಗುತ್ತಿರುವುದುತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದುಜೀವಕ್ಕೆ ಹಾನಿ ಉಂಟು ಮಾಡುವುದರಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತದೆ.ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದುಅಪರಾಧವಾಗಿದ್ದು, ಅದರ ಸೇವನೆಯಿಂದಾಗುವದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿಜಾಗೃತಿ ಮೂಡಿಸಬೇಕುಎಂದುಜೇವರ್ಗಿ ಸಾರ್ವಜನಿಕಆಸ್ಪತ್ರೆಯಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದಅಲ್ತಾಫ್ ಹುಸೇನ್‍ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜ್‍ನಲ್ಲಿ ‘ಎನ್.ಎಸ್.ಎಸ್‍ಘಟಕ’ದ ವತಿಯಿಂದಬುಧವಾರಜರುಗಿದ’ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮನುಷ್ಯ ಸದಾಎಚ್ಚರಿಕೆ ಹೊಂದಿರಬೇಕು. ಇವೆರಡರ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳು ಮನುಷ್ಯಜೀವನದ ಮೇಲೆ ಸಹಜ, ವಿವೇಚನಾಶೀಲನಾಗಿ ವರ್ತಿಸಿ, ಮಾದಕ ವಸ್ತುಗಳಿಂದ ತನ್ನನ್ನುತಾನು ದೂರವಿರಿಸಿಕೊಳ್ಳುವುದು ಆತನ ಪ್ರಮುಖವಾದಕರ್ತವ್ಯವಾಗಿದೆ. ಯುವಕರುಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದುಶೂಚನೀಯವಾಗಿದೆ.ಮಾದಕ ವಸ್ತು ಸೇವನೆ ಜೀವಕ್ಕೆಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆದಾಸರಾಗುತ್ತಿರುವುದುಇಂದುಯುವಜನಾಂಗಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕಸಾಕ್ಷಿಯಾಗಿದೆಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ, ಉಪನ್ಯಾಸಕರಾದರೇಣುಕಾಚಿಕ್ಕಮೇಟಿ ವೇದಿಕೆ ಮೇಲಿದ್ದರು.